Advertisement

ಸಲಿಂಗಕಾಮ ತೀರ್ಪು: ತಾನೇ ಶಿಕ್ಷಣ ಪಡೆಯಲು ನಿರ್ಧರಿಸಿದ ನ್ಯಾಯಮೂರ್ತಿ!

09:43 PM Apr 30, 2021 | Team Udayavani |

ಚೆನ್ನೈ: ಮದ್ರಾಸ್‌ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರು ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ. ವಿಶೇಷವೆಂದರೆ ಇದು ತೀರ್ಪಿನಂತಿರದೇ ಆತ್ಮಾವಲೋಕನದಂತಿದೆ.

Advertisement

ಇತ್ತೀಚೆಗೆ ಮಹಿಳಾ ಸಲಿಂಗಕಾಮಿ ಜೋಡಿಯೊಂದು, ನ್ಯಾಯಪೀಠದೆದುರು ಸಲಿಂಗಕಾಮಕ್ಕೆ ಸಂಬಂಧಿಸಿ ಮಾರ್ಗಸೂಚಿ ರಚಿಸುವಂತೆ ಮನವಿ ಮಾಡಿಕೊಂಡಿತ್ತು. ಇದನ್ನು ಆಲಿಸಿದ ನ್ಯಾಯಮೂರ್ತಿ ಎನ್‌.ಆನಂದ್‌ ವೆಂಕಟೇಶ್‌, ಈ ವಿಚಾರದಲ್ಲಿ ನನಗೆ ಸ್ವಲ್ಪ ಸಮಯ ಬೇಕು. ಸ್ವತಃ ನಾನೇ ಸಲಿಂಗಕಾಮಕ್ಕೆ ಸಂಬಂಧಿಸಿದ ಮಾನಸಿಕ ಶಿಕ್ಷಣ ಪಡೆದರೆ ಮಾತ್ರ ವಿಷಯ ಅರ್ಥವಾಗಲು ಸಾಧ್ಯ. ಇಲ್ಲಿ ನಾನು ಬುದ್ಧಿ ಬಳಸದೇ, ಹೃದಯವನ್ನು ಬಳಸುತ್ತಿದ್ದೇನೆ. ಆದ್ದರಿಂದ ವಿದ್ಯಾ ದಿನಕರನ್‌ ಬಳಿ, ಸಲಿಂಗಕಾಮದ ಕುರಿತು ತಿಳಿವಳಿಕೆ ಪಡೆಯುತ್ತೇನೆ. ಆಮೇಲೆ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ :ದೆಹಲಿಯಲ್ಲಿ ನಕಲಿ ರೆಮಿ ಡೆಸಿವಿರ್ ಮಾರಾಟ ಮಾಡುತ್ತಿದ್ದ ಏಳು ಜನರ ಬಂಧನ..!

ಮುಂದಿನ ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದ್ದಾರೆ! ಇಬ್ಬರು ಮಹಿಳಾ ಸಲಿಂಗಕಾಮಿಗಳು, ತಮಗೆ ಪೋಷಕರಿಂದ ರಕ್ಷಣೆ ನೀಡಬೇಕು, ನಮ್ಮ ಪಾಡಿಗೆ ಬದುಕಲು ಅವಕಾಶ ನೀಡಬೇಕು ಎಂದು ವಿನಂತಿಸಿದ ಹಿನ್ನೆಲೆಯಲ್ಲಿ ನ್ಯಾ.ವೆಂಕಟೇಶ್‌ ಮೇಲಿನಂತೆ ಅಭಿಪ್ರಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next