Advertisement

ಬಸವಾದಿ ಶರಣರ ಆದರ್ಶಗಳಲ್ಲಿ ಮುನ್ನಡೆಯಿರಿ: ಪಿಡಿಒ ವೀರಭದ್ರಶೆಟ್ಟಿ

05:28 PM Feb 01, 2022 | Team Udayavani |

ಪಿರಿಯಾಪಟ್ಟಣ: 12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಪಂಚವಳ್ಳಿ ಪಿಡಿಒ ವೀರಭದ್ರಶೆಟ್ಟಿ ತಿಳಿಸಿದರು.

Advertisement

ಪಟ್ಟಣದ ಅರಸನಕೆರೆಯ ಮಡಿಕಟ್ಟೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಾದಿ ಶರಣರು ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆಯನ್ನು ನೀಡಿರುವುದರೊಂದಿಗೆ ಸಮಾನತೆ, ಜಾತಿಯತೆ ನಿರ್ಮೂಲನೆ, ಸ್ತ್ರೀ ಸ್ವಾತಂತ್ರ್ಯದಂತಂಹ ಸಮಾಜಮುಖಿಯಾದ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಶರಣರ ಗೌರವಕ್ಕೆ ಪಾತ್ರರಾಗಿದ್ದಲ್ಲದೆ, ಮಾಚಿದೇವರು ಬಸವಾದಿ ಶರಣರ ಬಟ್ಟೆಯನ್ನು ತೊಳೆದು ಮಡಿ ಮಾಡುವ ಕಾಯಕದ ಜತೆಗೆ ಜನರ ಮನಸ್ಸಿನಲ್ಲಿರುವ ಕೊಳಕನ್ನು ಸಹ ತೊಳೆಯುವ ಕೆಲಸ ಮಾಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಮಾದೇಶ್ ಕುಮಾರ್ ಮಾತನಾಡಿ ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಾಚಿದೇವರು 354 ವಚನಗಳನ್ನು ಬರೆದಿದ್ದಾರೆ. ಮಡಿವಾಳ ತನ್ನ ಕಾಯಕದಲ್ಲಿ ಬಟ್ಟೆ ತೊಳೆಯುವುದರ ಜೊತೆಗೆ ಕೈ ಮತ್ತು ಕಲ್ಲನ್ನು ಸ್ವತ್ಛಗೊಳಿಸುವ ಕಾರ್ಯ ಮಾಡಿದ್ದಾರೆ ಎಂಬ ಹೆಗ್ಗಳಿಕೆ ನಮ್ಮದಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಶಿಕ್ಷಣ ಪಡೆಯಬೇಕು. ಐಎಎಸ್, ಕೆಎಎಸ್ ಅಧಿಕಾರಿಗಳಾಗಿ ಸಮಾಜದ ಪ್ರಗತಿಗೆ ಕಾರಣಿಕರ್ತರಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಮಡಿವಾಳರ ಸಂಘದ ಗೌರವಾಧ್ಯಕ್ಷ ಕೃಷ್ಣಶೆಟ್ಟಿ, ಉಪಾಧ್ಯಕ್ಷರಾದ ರಾಮು, ಗೊರಹಳ್ಳಿ ವಸಂತ್ ಕುಮಾರ್, ಮುಖಂಡರಾದ ಸತೀಶ್, ಪ್ರಸನ್ನ, ಅಶೋಕ್, ವೀರಭದ್ರ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next