Advertisement
ಬೆಳೆಗಾರ ಚೋವಂಡ ವಾಸು ಪೊನ್ನಪ್ಪ ಅವರ ಕಾಂಪೌಂಡ್‌ನ ಗೇಟನ್ನು ಧ್ವಂಸ ಮಾಡಿ ಮನೆಯಂಗಳಕ್ಕೆ ಲಗ್ಗೆ ಇಟ್ಟಿವೆ. ರಾತ್ರಿ ತೋಟಕ್ಕೆ ನುಗ್ಗಿ ಕಾಫಿ, ಅಡಿಕೆ ಬೆಳೆಗಳನ್ನು ನಾಶಪಡಿಸಿವೆ.ಕಳೆದೆರಡು ದಿನಗಳಿಂದ ಇದೇ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಆತಂಕ ಸೃಷ್ಟಿಸಿವೆ. ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತತ್‌ಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.