Advertisement

ಮಡಿಕೇರಿ –ಸಂಪಾಜೆ ಹೆದ್ದಾರಿ : 3ನೇ ದಿನವೂ ಸಂಚಾರ ಸ್ಥಗಿತ

03:05 AM Aug 16, 2018 | Team Udayavani |

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಸನಿಹದ ಮದೆನಾಡು, ಜೋಡುಪಾಲ ಬಳಿ ಬುಧವಾರ ಕೂಡ ರಸ್ತೆಗೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತು. ಸಂಪಾಜೆ ಗೇಟು ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಬುಧವಾರ ಅದರ ಪ್ರಮಾಣ ದುಪ್ಪಟ್ಟಾಗಿದೆ. ಗೇಟಿನಿಂದ ಮಡಿಕೇರಿ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿ, ಮೈಸೂರು ಕಡೆಗೆ ತೆರಳುತ್ತಿದ್ದ ನೂರಾರು ವಾಹನಗಳು ಅರ್ಧ ದಾರಿಯಿಂದ ಹಿಂದಿರುಗಿದವು.

Advertisement

ಮಂಗಳೂರು, ಪುತ್ತೂರು, ಸುಳ್ಯ ಭಾಗದಿಂದ ಮಡಿಕೇರಿ, ಮೈಸೂರು ಕಡೆ ತೆರಳುವ ವಾಹನಗಳು ಪರ್ಯಾಯ ದಾರಿ ಇಲ್ಲದೆ ಸಂಕಷ್ಟಕ್ಕೆ ಈಡಾದವು. ಕೆಲವು ವಾಹನಗಳು ಸೋಮವಾರ ಸುಳ್ಯ-ಸುಬ್ರಹ್ಮಣ್ಯ-ಗುಂಡ್ಯ-ಸಕಲೇಶಪುರ ಮೂಲಕ ಸಂಚರಿಸಿದ್ದವು. ಆದರೆ ಮಂಗಳವಾರ ಭಾರೀ ಮಳೆಯಿಂದ ಸುಬ್ರಹ್ಮಣ್ಯ ಭಾಗದಲ್ಲಿ ರಸ್ತೆ, ಸೇತುವೆ ಜಲಾವೃತಗೊಂಡು ಈ ದಾರಿಯೂ ಬಂದ್‌ ಆಗಿತ್ತು. ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಪ್ರಯಾಣಿಕರು ಅಕ್ಷರಶಃ ಪರದಾಡಿದರು.

ಕಾಣೆಯಾದ ಬೋಟ್‌ 3 ದಿನಗಳ ಬಳಿಕ ಪತ್ತೆ
ಮಲ್ಪೆ:
ಸಮುದ್ರ ಮಧ್ಯೆ ಎಂಜಿನ್‌ ಕೆಟ್ಟು ಅಪಾಯದಲ್ಲಿದ್ದ ಮಲ್ಪೆ ಬಂದರಿನ ವಿಶ್ವಾಸ್‌ ಹೆಸರಿನ ಆಳಸಮುದ್ರ ಬೋಟ್‌ ಮೂರು ದಿನಗಳ ಬಳಿಕ ಪತ್ತೆಯಾಗಿದ್ದು ಪಣಂಬೂರು ಬಂದರಿಗೆ ತರಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಕೋಸ್ಟ್‌ಗಾರ್ಡ್‌ ಮಂಗಳವಾರ ಮಧ್ಯಾಹ್ನ ಸುರತ್ಕಲ್‌ ಸಮೀಪ ಇದ್ದ ಬೋಟನ್ನು ಸಂಪರ್ಕಿಸಿದ್ದರೂ ಕೋಸ್ಟ್‌ಗಾರ್ಡ್‌ ಬೋಟಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಮರುದಿನಕ್ಕೆ ರಕ್ಷಣೆ ಕಾರ್ಯವನ್ನು ಮರುದಿನಕ್ಕೆ ಮುಂದೂಡಿತ್ತು. ಬುಧವಾರ ಬೋಟ್‌ ಪತ್ತೆಯಾಯಿತು.

3 ದಿನ ಕಡಲಿಗಿಳಿಯದಂತೆ ಸೂಚನೆ 
ಸಮುದ್ರ ಸಹಜ ಸ್ಥಿತಿಗೆ ಬಂದಿಲ್ಲ. ತೀರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಮುಂದಿನ 3 ದಿನಗಳವರೆಗೆ ಬೋಟ್‌ಗಳು ಮೀನುಗಾರಿಕೆಗೆ ತೆರಳಕೂಡದೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಉದಯವಾಣಿಗೆ ತಿಳಿಸಿದ್ದಾರೆ.

ಕೊಯಿಲ: ಗುಡ್ಡ  ಕುಸಿದು ತೋಟಕ್ಕೆ  ಹಾನಿ
ಆಲಂಕಾರು:
ಕಡಬ ತಾಲೂಕಿನ ಕೊಯಿಲ ಗ್ರಾಮದ ಓಕೆ ಕೊಲ್ಯದಲ್ಲಿ ಮಂಗಳವಾರ ತಡರಾತ್ರಿ ಕುಮಾರಧಾರಾ ನದಿಯ ಒಂದು ಭಾಗದ ಗುಡ್ಡ ಕುಸಿದಿದ್ದು ಬಾಲಕೃಷ್ಣ ಗೌಡ ಅವರ ಅಡಿಕೆ ತೋಟದ ಅರ್ಧ ಭಾಗ ನೀರು ಪಾಲಾಗಿದೆ. ಮಂಗಳವಾರ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುಮಾರಧಾರಾ ನದಿಯ ಪಾತ್ರದ ಇಕ್ಕೆಲಗಳಲ್ಲಿ ನೆರೆ ನೀರು ನುಗ್ಗಿ ರಾತ್ರಿವೇಳೆ ಸುಮಾರು ಐವತ್ತು ಅಡಿ ಎತ್ತರದ ಧರೆ ಕುಸಿದು ನದಿಯ ಒಡಲೊಳಗೆ ಸೇರಿದೆ. 30ಕ್ಕಿಂತಲೂ ಹೆಚ್ಚು ಅಡಿಕೆ ಗಿಡ, ಐದು ವಿವಿಧ ಜಾತಿಯ ಮರಗಳು ಮಣ್ಣು ಕುಸಿತದೊಂದಿಗೆ ನಾಪತ್ತೆಯಾಗಿವೆ. 50 ಸಾವಿರ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ.

Advertisement

ಮಲ್ಪೆ ಬೀಚ್‌: ರಸ್ತೆ ಸಮುದ್ರಪಾಲು ಭೀತಿ
ಮಲ್ಪೆ:
ಬೀಚ್‌ ನಲ್ಲಿ ಕಡಲಕೊರೆತ ತೀವ್ರಗೊಂಡಿದೆ. ಬೀಚ್‌ ನ ಉತ್ತರ ಭಾಗದಲ್ಲಿ ತಡೆಗೋಡೆ ಸಮೀಪ ಕೊರೆತ ಹೆಚ್ಚಿದ್ದು, ಇಂಟರ್‌ ಲಾಕ್‌ ರಸ್ತೆ ಕುಸಿಯುವ ಭೀತಿಯಲ್ಲಿದೆ. ಅಲೆಗಳು ದಡಕ್ಕೆ ಬಡಿದು ರಸ್ತೆಗೂ ನುಗ್ಗುತ್ತಿದೆ. ಬೀಚ್‌ ಬದಿಯಲ್ಲಿ ಅಂಗಡಿ, ಹೊಟೇಲ್‌ಗ‌ೂ ನೀರು ನುಗ್ಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯ ದಂತೆ ಎಚ್ಚರಿಕೆ ಫ‌ಲಕ ಹಾಕಲಾಗಿದೆ ಮಾತ್ರವಲ್ಲದೆ, ಮೈಕ್‌ ಮೂಲಕವೂ ಎಚ್ಚರಿಕೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next