Advertisement
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಅ.15ರಂದು ನಗರದ ಪಂಪಿನ ಕೆರೆಯಲ್ಲಿ 4 ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಿ ಕರಗ ಹೊರಡಿಸುವ ಮೂಲಕ ಮಡಿಕೇರಿ ದಸರಾ ಉತ್ಸವ ಆರಂಭವಾಗಲಿದೆ. ನವ ದಿನಗಳು ಕೂಡ ಕರಗಗಳು ನಗರ ಪ್ರದಕ್ಷಿಣೆಗೆ ತೆರಳಲಿವೆ ಎಂದು ಹೇಳಿದರು. ಕರಗಗಳು ಮತ್ತು ದಶ ಮಂಟಪಗಳು ಸಾಗುವ ನಗರದ ಮುಖ್ಯ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಯ ಇಕ್ಕೆಲಗಳ ಕಾಡು ಕಡಿದು ಸ್ವತ್ಛಗೊಳಿಸಲಾಗುತ್ತಿದೆ ಎಂದು ಹೇಳಿದರು.
ಮಡಿಕೇರಿ ದಸರಾ ಉತ್ಸವಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡಲು ಜನದಟ್ಟಣೆ ಏರ್ಪಡುವ ಸ್ಥಳಗಳಲ್ಲಿ ಪೊಲೀಸ್ ವ್ಯೂವ್ ಪಾಯಿಂಟ್ ಅಳವಡಿಸುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರಂತೆ ಪೊಲೀಸ್ ಇಲಾಖೆ ಸೂಚಿಸುವ ಕಡೆಗಳಲ್ಲಿ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಗಳನ್ನು ನಗರ ಸಭೆ ಕಡೆಯಿಂದ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಂಟಪಕ್ಕೆ ವಿಶೇಷ ಬಹುಮಾನ
ಅ.24ರ ರಾತ್ರಿ ದಶಮಂಟಪಗಳು ನಗರದಲ್ಲಿ ಶೋಭಾ ಯಾತ್ರೆ ನಡೆಸುತ್ತವೆ. ಈ ವೇಳೆ ಎಲ್ಲಾ ದಶ ಮಂಟಪಗಳು ಹೆಚ್ಚು ಪ್ರದರ್ಶನ ನೀಡಬೇಕೆಂದು ಸೂಚಿಸಲಾಗಿದೆ. ಮಾತ್ರವಲ್ಲದೇ ಹೆಚ್ಚು ಪ್ರದರ್ಶನ ನೀಡುವ ಮಂಟಪಕ್ಕೆ ವಿಶೇಷ ಬಹುಮಾಣವನ್ನು ದಸರಾ ಸಮಿತಿ ಯಿಂದ ನೀಡಲಾಗುತ್ತದೆ ಎಂದು ಅನಿತಾ ಪೂವಯ್ಯ ತಿಳಿಸಿದರು.
Related Articles
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಅ.15ರಂದು 4 ಶಕ್ತಿ ದೇವತೆಗಳ ಆಶೀರ್ವಾದ ಪಡೆದು ದಸರಾ ಆಚರಣೆ ಸುಸೂತ್ರವಾಗಿ ನಡೆಯಲೆಂದು ಪ್ರಾರ್ಥಿಸಲಾಗುತ್ತದೆ ಎಂದು ಹೇಳಿದರು.
Advertisement
ಈ ಬಾರಿ 2 ಕೋಟಿ ರೂ. ಅನುದಾನದ ಮೂಲಕ ಮಡಿಕೇರಿ ದಸರಾವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಚಿಂತಿಸಲಾಗಿತ್ತು. ಆದರೆ ಬರದ ಹಿನ್ನೆಲೆಯಲ್ಲಿ ಸರಕಾರ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಲು ದಸರಾ ಸಮಿತಿ ಮುಂದಾಗಿದ್ದು, ಈ ಹಣದಲ್ಲಿ ದಶ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲು ಯೋಜನೆ ರೂಪಿಸಲಾಗುತ್ತಿದೆ. ದೇಣೆಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ನಗರ ಸಭೆ ಪೌರಾಯುಕ್ತರೇ ದೇಣಿಗೆ ವಿಚಾರದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಅ.15ರಂದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕರಗ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ದಸರಾಗೆ ಹೆಚ್ಚಿನ ಅನುದಾನ ಒದಗಿಸಲು ಕೋರಲಾಗುವುದು ಎಂದರು.