ಮಡಿಕೇರಿ: ಶಬರಿಮಲೆಗೆ ತೆರಳಿದ್ದ ಮಡಿಕೇರಿ ನಗರದ ಯುವಕನೊಬ್ಬ ಮರಳುವ ಸಂದರ್ಭ ಸಮುದ್ರದಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರು ಬೀಚ್ ನಲ್ಲಿ ನಡೆದಿದೆ.
Advertisement
ನಗರದ ಸುದರ್ಶನ ಬಡಾವಣೆ ನಿವಾಸಿ ಲೋಕೇಶ್ ಅವರ ಪುತ್ರ ಶಶಾಂಕ್ (25) ಮೃತ ಯುವಕ. ಶಬರಿಮಲೆಯಿಂದ ಮರಳುವಾಗ ಯುವಕರ ತಂಡ ಕೇರಳದ ಕಣ್ಣೂರು ಬೀಚ್‌ಗೆ ಭೇಟಿ ನೀಡಿತ್ತು. ಈ ಸಂದರ್ಭ ಇವರು ಅಲೆಗಳಿಗೆ ಸಿಲುಕಿದರು ಎನ್ನಲಾಗಿದೆ. ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ ಶಶಾಂಕ್ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ. ತಂದೆ, ತಾಯಿ ಹಾಗೂ ಸಹೋದರಿಯನ್ನು ಅವರು ಅಗಲಿದ್ದಾರೆ.