Advertisement
ತೊರೆನೂರು ಗ್ರಾಮದ ಟಿ.ಆರ್. ಮಧು ಹಾಗೂ ಅನು ದಂಪತಿಯ ಮೊದಲ ಪುತ್ರ ಟಿ.ಎಂ. ತರುಣ್ (7) ಮೃತ ಬಾಲಕ. ರವಿವಾರ ಬೆಳಗ್ಗೆ ಮನೆಯ ಬಳಿ ಶುಂಠಿ ತುಂಬಿದ್ದ ಎತ್ತಿನಗಾಡಿ ಭಾರ ಹೆಚ್ಚಾಗಿ ಮಗುಚಿಕೊಂಡಿತು. ಈ ಸಂದರ್ಭ ಪಕ್ಕದಲ್ಲೇ ಇದ್ದ ತರುಣ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ತತ್ಕ್ಷಣ ಬಾಲಕನನ್ನು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಿಸದೆ ತರುಣ್ ಮೃತಪಟ್ಟಿದ್ದಾನೆ.
ಮೃತ ಬಾಲಕ ತರುಣ್ ಕೂಡಿಗೆಯ ವಿದ್ಯಾನಿಕೇತನ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.