Advertisement

ಮಡಿಕೇರಿ: ಆನೆ ದಂತದ ಆಭರಣ ಮಾರಾಟ ಯತ್ನ… ಓರ್ವನ ಸೆರೆ

11:53 PM May 25, 2023 | Team Udayavani |

ಮಡಿಕೇರಿ: ಅಮೂಲ್ಯ ಹರಳುಗಳನ್ನು ಒಳಗೊಂಡ ಆನೆ ದಂತದಿಂದ ಮಾಡಿರುವ 2 ಕೈ ಕಡಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಮಡಿಕೇರಿ ಸಿಐಡಿ ಪೊಲೀಸ್‌ ಅರಣ್ಯ ಘಟಕ ಬಂಧಿಸಿದೆ.

Advertisement

ಕೊಳ್ಳೇಗಾಲ ಮೂಲದ ಪಿ. ಪ್ರದೀಪ್‌ ಕುಮಾರ್‌ (42) ಬಂಧಿತ ಆರೋಪಿ. ನಗರದ ಫೀ|ಮಾ| ಕಾರ್ಯಪ್ಪ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ಮಾರ್ಗದ ಬಸ್‌ ತಂಗುದಾಣದ ಬಳಿ ಆನೆ ದಂತದಿಂದ ಮಾಡಿರುವ ಕೈ ಬಳೆ ಮಾದರಿಯ ನೀಲಿ ಮತ್ತು ಹಸುರು ಬಣ್ಣದ ಅಮೂಲ್ಯ ಹರಳುಗಳನ್ನು ಅಳವಡಿಸಿದ್ದ ಕಡಗಗಳನ್ನು ಮಾರಾಟ ಮಾಡಲು ಆತ ಯತ್ನಿಸುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳ ಸ್ಥಳಕ್ಕೆ ತೆರಳಿದಾಗ ಆರೋಪಿ ಮಾಲು ಸಹಿತ ಸೆರೆ ಸಿಕ್ಕಿದ್ದಾನೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಕೆ.ವಿ. ಶರತ್‌ಚಂದ್ರ ನಿರ್ದೇಶನದಂತೆ ಮಡಿಕೇರಿ ಸಿಐಡಿ ಪೊಲೀಸ್‌ ಅರಣ್ಯ ಘಟಕದ ಪೊಲೀಸ್‌ ಅಧೀಕ್ಷಕ ಕೆ.ಬಿ. ವಿಶ್ವನಾಥ್‌ ಮಾರ್ಗ ದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಸಿಬಂದಿಗಳಾದ ಶೇಖರ್‌, ರಾಘವೇಂದ್ರ, ಯೋಗೇಶ್‌, ಉಮೇಶ್‌, ಸ್ವಾಮಿ ಹಾಗೂ ಮಂಜುನಾಥ ಕಾರ್ಯಾಚರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next