Advertisement

ಬೆಂಗಳೂರಿನಲ್ಲಿ ಮಾದಿಗರ ಮಹಾ ಸಮಾವೇಶ: ರಾಜು

06:40 PM Mar 05, 2021 | Team Udayavani |

ಚಾಮರಾಜನಗರ: ನ್ಯಾಯಮೂರ್ತಿ ಸದಾಶಿವ ವರದಿ ಜಾರಿಗಾಗಿ ಮಾದಿಗರ ಮಹಾ ಸಮಾವೇಶ ಹಾಗೂ ಮಾದಿಗ ವಿರಾಟ್‌ ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಮಾ.8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿ ದ್ರಾವಿಡ ಮಾದಿಗರ ಸಮಿತಿಯ ಅಧ್ಯಕ್ಷ ಡಿ.ಆರ್‌.ರಾಜು ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಭಾಗವಹಿಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು101 ಇವೆ. ಈ ಸಮುದಾಯಗಳಲ್ಲಿ ಅಭಿವೃದ್ಧಿ ಹೊಂದಲು ಸರ್ಕಾರವು 2005 ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿತು. ಈ ಆಯೋಗವು ಉಪಜಾತಿಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ 101 ಜಾತಿಗಳಲ್ಲಿ ಶೇ.15 ರ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. 101 ಜಾತಿಗಳ ಪೈಕಿ ಬಲಿಷ್ಟವಾದ ಒಂದೆರಡು ಪ್ರಮುಖ ಜಾತಿಗಳು ಮಾತ್ರ ಕಳೆದ 70 ವರ್ಷಗಳಿಂದ ಸೌಲಭ್ಯ ಪಡೆಯುತ್ತಿವೆ ಎಂದರು.

ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾದರೆ ಮಾದಿಗ ಆದಿ ದ್ರಾವಿಡ ಒಳಗೊಂಡಂತೆ 47 ಜಾತಿಗಳಶೇ.6 ರಷ್ಟು ಹಾಗೂ ಹೊಲೆಯ, ಚಲವಾದಿ ಸೇರಿದಂತೆ 50 ಜಾತಿಗೆ ಶೇ.5 ರಷ್ಟು, ಲಂಬಾಣಿ, ಬೋವಿಗೆ ಶೇ.3 ಹಾಗೂ ಇತರೆ ಶೇ.1 ರಷ್ಟು ನಿಗದಿಯಾಗುತ್ತದೆ. ಇದನ್ನು ನಿಗದಿ ಮಾಡುವಂತೆ 2012 ರಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾ. ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸಿಲ್ಲ.ಹೀಗಾಗಿ ಈ ವರದಿ ಅನ್ವಯ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆದಿದ್ರಾವಿಡ ಮಾದಿಗರ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಪಿ.ಮಂಜುನಾಥ, ಜಿ.ಅಶೋಕ್‌, ಉಪಾಧ್ಯಕ್ಷಎಂ.ಮಹದೇವ್‌, ಪ್ರಧಾನ ಕಾರ್ಯದರ್ಶಿ ದಿನೇಶ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next