ಭೋಪಾಲ್: ಮಧ್ಯಪ್ರದೇಶದ ಹಿರಿಯ ನಾಗರಿಕರನ್ನು ವಿಮಾನದಲ್ಲಿ ತೀರ್ಥಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವಿವಾರ ಘೋಷಿಸಿದ್ದಾರೆ.
Advertisement
ಯಾತ್ರೆಯ ವೆಚ್ಚವನ್ನೂ ಸರಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಸಂತ ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ಚಂಬಲ್ ವಿಭಾಗದ ವಿಕಾಸ ಯಾತ್ರೆ ಉದ್ಘಾಟಿಸಿ, ಚೌಹಾಣ್ ಮಾತನಾಡಿದರು. ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅನ್ವಯ ಹಿರಿಯ ನಾಗರಿಕರಿಗೆ ತೀರ್ಥಕ್ಷೇತ್ರಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಎಂದರು.