ಮೀನಾ, ಮುಸ್ಲಿಂ, ಗುಜ್ಜರ್ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಮೀನಾ ಸಮುದಾಯದವರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಕಿರೋಡಿ ಲಾಲ್ ಮೀನಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಈ ಪ್ರಯೋಗ ಸಫಲವಾಗಲಿದೆಯೋ ಇಲ್ಲವೋ ಎನ್ನುವುದನ್ನು ಡಿ.3ರ ಫಲಿತಾಂಶದ ದಿನ ಗೊತ್ತಾಗಲಿದೆ.
Advertisement
ಕಾಂಗ್ರೆಸ್ ಶಾಸಕ ಅಬ್ರಾರ್ ಅವರು 2020ರಲ್ಲಿ ಶಾಸಕ ಸಚಿನ್ ಪೈಲಟ್‌ಗೆ ಬೆಂಬಲ ನೀಡದೇ ಇದ್ದದ್ದು ಗುಜ್ಜರ್ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಆ ಸಮುದಾಯ ಕಾಂಗ್ರೆಸ್ ವಿರುದ್ಧ ಮತ ಹಾಕುತ್ತದೆಯೋ ಎಂಬ ಜಿಜ್ಞಾಸೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಕಿರೋಡಿ ಲಾಲ್ ಮೀನಾ ಕ್ಷೇತ್ರದಲ್ಲಿ ಸತತವಾಗಿ ಪ್ರವಾಸ ಮಾಡಿದ್ದಾರೆ ಮತ್ತು ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಸಿಎಂ ಗೆಹ್ಲೋಟ್ ಅವರ ಕುತಂತ್ರದಿಂದಲೇ ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ ಎನ್ನುವುದು ಮೀನಾ ಅವರ ವಾದ.