ಭೋಪಾಲ್: ತಾವು ಸಾಕಿದ ಜಾನುವಾರುಗಳನ್ನು ಬೀದಿ ಬದಿಯಲ್ಲಿ ಮುಕ್ತವಾಗಿ ಅಡ್ಡಾಡಲು ಬಿಡುವ ಗ್ರಾಮಸ್ಥರಿಗೆ ಐದು ಬಾರಿ ಚಪ್ಪಲಿ ಏಟು ನೀಡಿ, 500 ರೂಪಾಯಿ ದಂಡ ವಿಧಿಸಬೇಕು…ಇದು ಮಧ್ಯಪ್ರದೇಶದ ಹಳ್ಳಿಯೊಂದರ ಸರ್ ಪಂಚ್(ಮುಖ್ಯಸ್ಥ) ಹೊರಡಿಸಿದ ಆದೇಶ!
ಇದನ್ನೂ ಓದಿ:Sandalwood: ಎಲ್ಲವೂ ಚೆನ್ನಾಗಿತ್ತು.. ಒಳ್ಳೆಯ ಸಿನಿಮಾ, ಭರ್ಜರಿ ನಿರೀಕ್ಷೆ..; ಆದರೆ……
ಮಧ್ಯಪ್ರದೇಶದ ನಾಗ್ನಾಡು ಹಳ್ಳಿಯ ಸರ್ ಪಂಚ್ ಕಚೇರಿಯ ಸಿಬಂದಿ ಮನೆ, ಮನೆಗೆ ತೆರಳಿ ಹೊಸದಾಗಿ ಜಾರಿಗೊಳಿಸಿರುವ ಆದೇಶದ ಬಗ್ಗೆ ಡಂಗುರ ಸಾರುತ್ತಿರುವುದಾಗಿ ವರದಿ ವಿವರಿಸಿದೆ.
ವಿಡಿಯೋದಲ್ಲಿ ಸರ್ ಪಂಚ್ ಕಚೇರಿಯ ಸಿಬಂದಿ ಡಂಗುರ ಸಾರಿಸುತ್ತಾ ಹೊಸ ಆದೇಶದ ಬಗ್ಗೆ ಗ್ರಾಮಸ್ಥರ ಗಮನ ಸೆಳೆಯುತ್ತಿರುವುದು ದಾಖಲಾಗಿದೆ. ಒಂದು ವೇಳೆ ನಿಮ್ಮ ದನ, ಕರು, ಎತ್ತುಗಳು ಬೀದಿಯಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರೆ, ಅಂತಹವರಿಗೆ ಚಪ್ಪಲಿಯಿಂದ ಐದು ಏಟು ನೀಡಿ, 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಕೂಗುತ್ತಿರುವುದು ವಿಡಿಯೋದಲ್ಲಿದೆ.
ಹಳ್ಳಿ ಸರ್ ಪಂಚ್ ಹೊಸ ನಿಯಮದ ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.