Advertisement

ಮಧ್ಯಪ್ರದೇಶ: ಗ್ವಾಲಿಯರ್ ಮೃಗಾಲಯದಲ್ಲಿ ತಾಯಿ ಹುಲಿ ದಾಳಿಗೆ ಹೆಣ್ಣು ಹುಲಿ ಮರಿ ಸಾವು

06:59 PM Sep 10, 2022 | Team Udayavani |

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಮೃಗಾಲಯದಲ್ಲಿ ಹೆಣ್ಣು ಹುಲಿಯೊಂದು ತನ್ನ ತಾಯಿಯ ದಾಳಿಯಿಂದ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಶುಕ್ರವಾರ ಸಂಜೆ ಗಾಂಧಿ ಪ್ರಾಣಿ ಉದ್ಯಾನದಲ್ಲಿ ಮೀರಾ ಎಂಬ ಹೆಸರಿನ ತಾಯಿ ಹುಲಿ ತನ್ನಒಂದು ವರ್ಷದ ಹೆಣ್ಣು ಹುಲಿ ಮರಿ ಭವಾನಿ ಮೇಲೆ ದಾಳಿ ಮಾಡಿದೆ ಎಂದು ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಶನ್‌ನ ಹೆಚ್ಚುವರಿ ಆಯುಕ್ತ ಮುಕುಲ್ ಗುಪ್ತಾ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೀರಾ ಎರಡು ಮರಿಗಳಿಗೆ ಜನ್ಮ ನೀಡಿದ್ದಳು. ಒಂದು ಗಂಡು ಮತ್ತು ಒಂದು ಹೆಣ್ಣು ಎಂದು ಅವರು ಹೇಳಿದರು.

ಹೆಣ್ಣು ಮರಿ ಹುಟ್ಟಿನಿಂದಲೇ ದುರ್ಬಲವಾಗಿದ್ದು, ತನ್ನ ತಾಯಿಯೊಂದಿಗೆ ಇರಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಯಿ ಹುಲಿಯು ಹಠಾತ್ತನೆ ದಾಳಿ ನಡೆಸಿದಾಗ ಮರಿಯ ಒಂದು ಕಾಲು ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ ಎಂದು ಅವರು ಹೇಳಿದರು.

Advertisement

ಇದನ್ನೂ ಓದಿ:ಅದ್ದೂರಿ ಸಮಾರಂಭ: ರಾಜ ಎಂದು ಹೆಸರಿಸಲ್ಪಟ್ಟ ಚಾರ್ಲ್ಸ್ III

ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾರ್ಗಸೂಚಿಯಂತೆ ಮರಿಯ ಮೃತದೇಹವನ್ನು ವಿಲೇವಾರಿ ಮಾಡಲಾಗಿದ್ದು, ಮೃಗಾಲಯದಲ್ಲಿ ಈಗ ಐದು ಹುಲಿಗಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next