ಭೋಪಾಲ್: ಮಧ್ಯಪ್ರದೇಶದ ಗುಣ ಜಿಲ್ಲೆಯ ಶಾಲೆಯಲ್ಲಿ ಭಾರತ್ ಮಾತಾಕೀ ಜೈ ಅಂದ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಹೆತ್ತವರು ಮತ್ತು ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಬೆಳಗ್ಗಿನ ಅಸೆಂಬ್ಲಿಯ ಬಳಿಕ ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆಯೇ ವಿದ್ಯಾರ್ಥಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಹಾಕಿದ್ದಾನೆ. ಆತನಿಗೆ ಶಿಕ್ಷಕಿ ಜಾಸ್ಮಿನಾ ಖಾತುನ್, ಗ್ರೌಂಡ್‌ನಲ್ಲಿ ಕೂರುವ ಶಿಕ್ಷೆ ವಿಧಿಸಿದ್ದಾರೆ.
ವಿದ್ಯಾರ್ಥಿ ಮನೆಗೆ ಬಂದು ಹೆತ್ತವರ ಬಳಿ ವಿಷಯ ಹೇಳಿದ್ದಾನೆ. ಇದರಿಂದಾಗಿ ಅವರು ಮತ್ತು ಇತರರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ನಂತರ ಶಾಲೆ ಕ್ಷಮೆ ಕೋರಿದ್ದಲ್ಲದೆ,ಪ್ರತಿ ದಿನ ಅಸೆಂಬ್ಲಿಯ ಕೊನೆಯಲ್ಲಿ ರಾಷ್ಟ್ರಗೀತೆ ಬಳಿಕ ಭಾರತ್ ಮಾತಾ ಕಿ ಜೈ ಘೋಷಣೆ ಹಾಕುವಂತೆ ಸೂಚಿಸಿದೆ.
ಗುಣಾ ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದೆ.