Advertisement

ಮಧ್ಯಪ್ರದೇಶದಲ್ಲಿ ವಾರಕ್ಕೊಮ್ಮೆ ಮಕ್ಕಳಿಗೆ ಪಾಟೀಚೀಲದಿಂದ ಮುಕ್ತಿ!

12:41 AM Sep 04, 2022 | Team Udayavani |

ಭೋಪಾಲ್‌: ಮಕ್ಕಳಿಗೆ ಶಾಲಾಶಿಕ್ಷಣ ಒಂದು ರೀತಿಯ ಹೊರೆಯಂತೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಶಾಲೆಗೆ ಒಯ್ಯುವ ಪಾಟೀಚೀಲದ ತೂಕವೂ ಹೆಚ್ಚಾಗಿ ಮಕ್ಕಳು ಒದ್ದಾಡುತ್ತಿರುವುದು ಗೊತ್ತಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಮಧ್ಯಪ್ರದೇಶ ಸರ್ಕಾರ, ವಾರಕ್ಕೊಮ್ಮೆ ಮಕ್ಕಳು ಶಾಲೆಗಳಿಗೆ ಪಾಟೀಚೀಲ ಒಯ್ಯುವುದೇ ಬೇಡವೆಂದು ತಿಳಿಸಿದೆ.

Advertisement

ಆ ದಿನದಂದು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ನಿರತರಾಗಬಹುದು. ಹಾಗೆಯೇ ಪ್ರತೀ ದಿನ ಮಕ್ಕಳು ತರುವ ಪಾಟಿಚೀಲದ ತೂಕ ಎಷ್ಟಿರಬೇಕು ಎನ್ನುವುದನ್ನು ತರಗತಿವಾರು ವಿಂಗಡಿಸಿ ನೋಟಿಸ್‌ ಬೋರ್ಡ್‌ನಲ್ಲಿ ಹಾಕಲು ಸೂಚಿಸಲಾಗಿದೆ. ಇದನ್ನು ಪರಿಶೀಲಿಸಲು ಅಧಿಕಾರಿಗಳು ದಿಢೀರನೆ ವಿವಿಧ ಶಾಲೆಗಳಿಗೆ ಭೇಟಿ ನೀಡಬೇಕು ಎಂದೂ ಹೇಳಲಾಗಿದೆ. ಮಧ್ಯಪ್ರದೇಶದ 2020ರ ಶಾಲಾನೀತಿಯಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next