ಭೋಪಾಲ್: ಮಧ್ಯಪ್ರದೇಶದ ಮಿಷನರಿ ಶಾಲೆಯೊಂದರಲ್ಲಿ ಅಕ್ರಮವಾಗಿ ಮತಾಂತರ ನಡೆಸಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯದ ಎಲ್ಲ ಮಿಷನರಿ ಶಾಲೆಗಳ ಮೇಲೆ ನಿಗಾ ಇರಿಸಲು ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಎಚ್ಚರಿಸಿದೆ.
Advertisement
ಭೋಪಾಲ್‌ನ ಕ್ರೈಸ್ಟ್ ಮೆಮೋರಿಯಲ್ ಶಾಲೆಯ ಆವರಣದಲ್ಲಿ ಇಬ್ಬರು ಹಿಂದೂಗಳು ಭಾನುವಾರ ಅಕ್ರಮವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ವಿಚಾರ ಹೊರಬಿದ್ದಿತ್ತು.
ಇದನ್ನೂ ಓದಿ:ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ
ಈ ವಿಚಾರವಾಗಿ ಪೊಲೀಸ್ ದೂರು ದಾಖಲಾಗಿದ್ದು, ಶಾಲೆಯ ಆವರಣದಲ್ಲಿ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.