Advertisement

ಮತಾಂತರ ತಡೆ : ಮಧ್ಯಪ್ರದೇಶದಲ್ಲೂ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಅಂಗೀಕಾರ..!

06:48 PM Mar 08, 2021 | Team Udayavani |

ಮಧ್ಯಪ್ರದೇಶ : ಮಧ್ಯಪ್ರದೇಶ ಸರ್ಕಾರ ಮತಾಂತರ ತಡೆಗಾಗಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2021 ನ್ನು ಸೋಮವಾರ(ಮಾ. 8) ವಿಧಾನಸಭೆಯಲ್ಲಿ ಅಂಗೀಕರಿಸಿದೆ.

Advertisement

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಓದಿ : ಚೀನಾ-ಟೆಸ್ಲಾಗೆ ‘ಓಲಾ’ ಟಕ್ಕರ್…ಬೆಂಗಳೂರಲ್ಲಿ ತಲೆ ಎತ್ತಲಿದೆ ‘ಇ-ಸ್ಕೂಟರ್’ ಉತ್ಪಾದನೆ ಘಟಕ  

“ನಾವು ಮಧ್ಯಪ್ರದೇಶದಲ್ಲಿ ಬಲವಂತದ ಮತಾಂತರವನ್ನು ಅನುಮತಿಸುವುದಿಲ್ಲ. ಬಲವಂತವಾಗಿ ಮತಾಂತರವನ್ನು ಮಾಡುವವರು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 50,000 ದಂಡವನ್ನು ವಿಧಿಸಬೇಕಾಗುತ್ತದೆ. ಅಪ್ರಾಪ್ತ ಬಾಲಕಿಯರನ್ನು ಮತಾಂತರಗೊಳಿಸಿದ, ಮದುವೆಯಾದ ಹಾಗೂ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ “ಎಂದು ಶ್ರೀ ಚೌಹಾನ್ ಹೇಳಿದ್ದಾರೆ.

“ಹೊಸ ಮಸೂದೆಯಡಿಯಲ್ಲಿ, ಯಾರೊಬ್ಬರ ಮೇಲಾದರೂ ಧಾರ್ಮಿಕ ಮತಾಂತರವನ್ನು ಒತ್ತಾಯಿಸುವುದನ್ನು ಮಾಡಿದ್ದಲ್ಲಿ ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 25,000 ದಂಡವನ್ನು ವಿಧಿಸಬೇಕಾಗುತ್ತದೆ” ಎಂದು ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

Advertisement

ಓದಿ : ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ

ಈ ಹೊಸ ಮಸೂದೆಯ ಅಡಿಯಲ್ಲಿ, ಅಪ್ರಾಪ್ತರನ್ನು ಬಲವಂತವಾಗಿ ಮತಾಂತರಿಸುವುದನ್ನು ಒಳಗೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಬಲವಂತವಾಗಿ ಮತಾಂತರಗೊಳಿಸಿದ್ದಲ್ಲಿ ಎರಡರಿಂದ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50,000 ದಂಡ ವಿಧಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು, ಉತ್ತರ ಪ್ರದೇಶ ಸರ್ಕಾರದ ಶಾಸಕಾಂಗ ಸಭೆಯು ಕೂಡ ಇದೇ ಮಾದರಿಯ ಮಸೂದೆಯನ್ನು ಅಂಗೀಕರಿಸಿದೆ. ಕಾನೂನು ಬಾಹೀರ ಧಾರಮಿಕ ಮತಾಂತರದ ನಿಷೇಧ ಮಸೂದೆಯನ್ನು ಫೆಬ್ರವರಿ 24 2021 ರಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಇದಕ್ಕೂ ಮೊದಲು, ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿ, ಲವ್ ಜಿಹಾದ್ ಸಂಬಂಧಿತ ಅಪರಾಧಗಳಿಗೆ ಗರಿಷ್ಠ 10 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು.

ಓದಿ : ಕರ್ನಾಟಕ ಬಜೆಟ್ 2021: ಉದ್ಯಾನ ನಗರಿ ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ

Advertisement

Udayavani is now on Telegram. Click here to join our channel and stay updated with the latest news.

Next