Advertisement

‘ಹಿಂಗ್ಲಿಷ್‌’ನಲ್ಲಿ ಪರೀಕ್ಷೆ ಬರೆಯಲು ಅವಕಾಶ

03:20 AM Jun 01, 2018 | Karthik A |

ಜಬಲ್ಪುರ: ನಮ್ಮಲ್ಲಿ ಇಂಗ್ಲೀಷ್‌ ಮಿಶ್ರಿತ ಕನ್ನಡ (ಕಂಗ್ಲೀಷ್‌) ಮಾತನಾಡಿದರೆ ನಗೆಪಾಟಲಿಗೀಡಾಗುವುದುಂಟು. ಪರೀಕ್ಷೆಯಲ್ಲಿ ನಮ್ಮಿಷ್ಟದಂತೆ ಕಂಗ್ಲೀಷ್‌ ನಲ್ಲಿ ಉತ್ತರಿಸಿದರೆ ಸೊನ್ನೆ ಅಂಕ ಗ್ಯಾರಂಟಿ. ಆದರೆ, ಮಧ್ಯಪ್ರದೇಶದಲ್ಲಿ ಚಾಲ್ತಿಯಲ್ಲಿರುವ ‘ಹಿಂಗ್ಲಿಷ್‌’ (ಹಿಂದಿ ಮಿಶ್ರಿತ ಇಂಗ್ಲೀಷ್‌) ವೈಖರಿಗೆ ಈಗ ಅನುಮೋದನೆಯ ಮುದ್ರೆ ಬಿದ್ದಿದೆ.

Advertisement

ಮಧ್ಯಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯವು (ಎಂ.ಪಿ.ಎಂ.ಎಸ್‌.ಯು.) ತನ್ನ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಹಿಂಗ್ಲಿಷ್‌ ನಲ್ಲಿಯೇ ಉತ್ತರಿಸಬಹುದೆಂಬ ಮಹತ್ವದ ನಿರ್ಧಾರ ಕೈಗೊಂಡಿದೆ. ಲಿಖಿತ ಹಾಗೂ ಮೌಖೀಕ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳಿಗೆ ಈ ಸ್ವಾತಂತ್ರ್ಯ ನೀಡಲಾಗಿದೆ. ಮೇ 26ರಂದು ಅಧಿಸೂಚನೆ ಹೊರಡಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್‌.ಎಸ್‌. ಶರ್ಮಾ, “ಹಿಂಗ್ಲಿಷ್‌ ನಲ್ಲಿ ಉತ್ತರಿಸಲು ಅನುವು ಮಾಡಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ನೆರವಾಗಲಿದೆ. ಇದು ವಿದ್ಯಾರ್ಥಿಗಳಿಗೆ ಖುಷಿ ಕೊಡುವ ವಿಚಾರ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next