Advertisement
ಈ ಕುರಿತು ಮಾಹಿತಿ ನೀಡಿದ ಸಿಧಿ ಎಸ್ಪಿ ರವೀಂದ್ರ ವರ್ಮಾ, ಆರೋಪಿ ಬ್ರಜೇಶ್‌ನ್ನು ಬಂಧಿಸಲಾಗಿದೆ. ಧ್ವನಿ ಬದಲಿಸುವ ಆ್ಯಪ್ ಮೂಲಕ ಆತ, ಮಹಿಳಾ ಕಾಲೇಜು ಉಪನ್ಯಾಸಕಿಯಂತೆ ಹೆಣ್ಣುಮಕ್ಕಳೊಂದಿಗೆ ಮಾತನಾಡುತ್ತಿದ್ದ. ಅವರಿಗೆ ಸ್ಕಾಲರ್‌ಶಿಪ್ ಇಲ್ಲವೇ ಸರಕಾರಿ ಯೋಜನೆಯಿಂದ ಹಣ ಕೊಡಿಸುವುದಾಗಿ ಹೇಳುತ್ತಿದ್ದ. ಇದನ್ನು ನಂಬಿ ಆ ಹೆಣ್ಣುಮಕ್ಕಳು ಮೋಸ ಹೋಗಿದ್ದಾರೆ. ಬ್ರಜೇಶ್ ಕಾರ್ಮಿಕನಾಗಿದ್ದು, ಯೂಟ್ಯೂಬ್ ಮೂಲಕ ಆ್ಯಪ್ ಬಳಸುವುದನ್ನು ಕಲಿತಿದ್ದ. ಹೆಣ್ಣು ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆಸಿ, ಅತ್ಯಾಚಾರವೆಸಗಿ, ಅವರಲ್ಲಿದ್ದ ಫೋನ್ ಕೂಡ ದೋಚುತ್ತಿದ್ದ. ಅನಂತರ ಆ ಮೊಬೈಲ್‌ನಿಂದ ಇತರ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ಸಂತ್ರಸ್ತರೆಲ್ಲರೂ ಬುಡಕಟ್ಟು ಜನಾಂಗದವರು, ಆರ್ಥಿಕವಾಗಿ ಹಿಂದುಳಿದವರು ಎಂದು ತಿಳಿಸಿದ್ದಾರೆ. Advertisement
Madhya Pradesh ಧ್ವನಿ ಬದಲಿಸುವ ಆ್ಯಪ್ ಬಳಸಿ 7 ಮಂದಿ ಮೇಲೆ ಅತ್ಯಾಚಾರ
11:28 PM May 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.