Advertisement

ಮಧ್ಯಪ್ರದೇಶ: ಇಂದು ಸೋಮವಾರವೂ ಮುಂದುವರಿದ ಐಟಿ ದಾಳಿ, ಬಿಗಿ ಭದ್ರತೆ

09:02 AM Apr 09, 2019 | Team Udayavani |

ಭೋಪಾಲ್‌ : ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಅವರ OSD ಆಗಿರುವ ಪ್ರವೀಣ್‌ ಕಕ್ಕಡ್‌ ಮತ್ತು ಈತನ ಸಹವರ್ತಿ ಅಶ್ವಿ‌ನ್‌ ಶರ್ಮಾ ಅವರ ನಿವಾಸ ಸೇರಿದಂತೆ ಸೇರಿದಂತೆ ಮಧ್ಯಪ್ರದೇಶದ ಹಲವಾರು ಸ್ಥಳಗಳಲ್ಲಿ ಇಂದು ಸೋಮವಾರ ಬೆಳಗ್ಗೆ ಕೂಡ ಐಟಿ ದಾಳಿಗಳು ಮುಂದುವರಿದಿವೆ.

Advertisement

ಐಟಿ ಅಧಿಕಾರಿಗಳು ಅಶ್ವಿ‌ನ್‌ ಶರ್ಮಾ ಮತ್ತು ಪ್ರವೀಣ್‌ ಕಕ್ಕಡ್‌ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಇಂದು ಸೋಮವಾರ ಬೆಳಗ್ಗೆ ಕೂಡ ಮುಂದುವರಿಸಿರುವಂತೆಯೇ ಶೋಧ, ದಾಳಿ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿನ್ನೆ ಭಾನುವಾರ ದಿಲ್ಲಿಯ ಐಟಿ ಅಧಿಕಾರಿಗಳು ಇಂದೋರ್‌ ನಲ್ಲಿನ ಪ್ರವೀಣ್‌ ಕಕ್ಕಡ್‌ ಅವರ ನಿವಾಸದಲ್ಲಿ ಮತ್ತು ಸಿಎಂ ಕಮಲ್‌ ನಾಥ್‌‌ ಮಾಜಿ ಸಲಹೆಗಾರ ಆರ್‌ ಕೆ ಮಿಗಲಾನಿ ಅವರ ದಿಲ್ಲಿ ನಿವಾಸದಲ್ಲಿ ಶೋಧ ಕಾರ್ಯಾಚರಣ ನಡೆಸಿದ್ದರು. ಇವರಿಬ್ಬರ ವಿರುದ್ಧ ಅಪಾರ ಪ್ರಮಾಣದ ತೆರಿಗೆ ವಂಚನೆ ಆರೋಪ ಇದೆ.

ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ಕನಿಷ್ಠ ಇಂದೋರ್‌, ಭೋಪಾಲ್‌, ಗೋವಾ ಮತ್ತು ದಿಲ್ಲಿ ಸೇರಿದಂತೆ ವಿವಿಧೆಡೆಯ ಸುಮಾರು 50 ತಾಣಗಳಲ್ಲಿ ಶೋಧ – ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next