Advertisement

ರಸಪ್ರಶ್ನೆಯಲ್ಲಿ ಗೆದ್ದರೆ ಅಯೋಧ್ಯೆ ಪ್ರಯಾಣ!

12:37 AM Oct 19, 2021 | Team Udayavani |

ಭೋಪಾಲ್‌: ರಾಮಾಯಣದ ಬಗ್ಗೆ ನಡೆಯುವ ರಸಪ್ರಶ್ನೆಯಲ್ಲಿ ವಿಜೇತರಾಗುವವರಿಗೆ ಅಯೋಧ್ಯೆಗೆ ಉಚಿತವಾಗಿ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಧ್ಯಪ್ರದೇಶ ಬಿಜೆಪಿ ಸರಕಾರ ಘೋಷಿಸಿದೆ.

Advertisement

ಇಂದೋರ್‌ನ ಡಾ| ಅಂಬೇಡ್ಕರ್‌ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ರಾಮಾಯಣದ ಅಯೋಧ್ಯಾ ಕಾಂಡದ ಕುರಿತಾಗಿ ಏರ್ಪಡಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರವಾಸೋದ್ಯಮ ಸಚಿವರಾದ ಉಷಾ ಠಾಕೂರ್‌ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ರಸಪ್ರಶ್ನೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ ಎನ್ನಲಾಗಿದೆ. ರಸಪ್ರಶ್ನೆ ಸ್ಪರ್ಧೆಯನ್ನು ಯಾವಾಗ, ಎಲ್ಲಿ ಆಯೋಜಿಸಲಾಗುವುದು, ಯಾರು ಭಾಗವಹಿಸಬಹುದು ಎನ್ನುವ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ:ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next