Advertisement

2,000 ಕೋಟಿ ರೂ. ವೆಚ್ಚದ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಮಧ್ಯಪ್ರದೇಶ ಸರ್ಕಾರ

09:12 AM Jan 11, 2022 | keerthan |

ಭೋಪಾಲ್: ಮಧ್ಯಪ್ರದೇಶ ಸರ್ಕಾರವು 2,000 ಕೋಟಿ ರೂ. ವೆಚ್ಚದಲ್ಲಿ ಧಾರ್ಮಿಕ ಗುರು ಮತ್ತು ತತ್ವಜ್ಞಾನಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಯೋಜನೆಗೆ ಮುಂದಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ ವಾರ ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್‌ ನ ಟ್ರಸ್ಟಿಗಳ ಮಂಡಳಿಯ ಸಭೆಯನ್ನು ಉದ್ದೇಶಿಸಿ ಯೋಜನೆಯ ಕುರಿತು ಚರ್ಚಿಸಿದ್ದಾರೆ. ಸ್ವಾಮಿ ಅವೇಧಶಾನಂದ ಗಿರಿ ಜಿ ಮಹಾರಾಜ್ ಸೇರಿದಂತೆ ಪ್ರಮುಖ ಸಂತರು ಮತ್ತು ಟ್ರಸ್ಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

ಪ್ರತಿಪಕ್ಷ ಕಾಂಗ್ರೆಸ್ ಯೋಜನೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದೆ. ರಾಜ್ಯ ಬಜೆಟ್‌ ನಲ್ಲಿ ಹಣ ಮಂಜೂರು ಮಾಡಿದ ನಂತರ ಮಾತ್ರ ಚರ್ಚಿಸುವುದಾಗಿ ಹೇಳಿದೆ. ಅದಲ್ಲದೆ ರಾಜ್ಯದಲ್ಲಿ ಮಾಡಿರುವ ಭಾರಿ ಸಾಲದ ಬಗ್ಗೆಯೂ ಕಾಂಗ್ರೆಸ್ ಗಮನ ಸೆಳೆದಿದೆ.

ಓಂಕಾರೇಶ್ವರದಲ್ಲಿ 108 ಅಡಿ ಬಹುಲೋಹದ ಆದಿಶಂಕರ ಪ್ರತಿಮೆ ಮ್ಯೂಸಿಯಂ ಮತ್ತು ಅಂತಾರಾಷ್ಟ್ರೀಯ ವೇದಾಂತ ಸಂಸ್ಥಾನ ನಿರ್ಮಿಸುವ ಯೋಜನೆಯು ರಾಜ್ಯವನ್ನು ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಏಕತೆಯ ಪ್ರತಿಮೆ ಎಂದು ಕರೆಯಲ್ಪಡುವ ಪ್ರತಿಮೆಯ ಎತ್ತರವು 108 ಅಡಿಯಾಗಿರಲಿದ್ದು, 54 ಅಡಿ ಎತ್ತರದ ವೇದಿಕೆಯಲ್ಲಿ ಸ್ಥಾಪಿಸಲಾಗುವುದು. ಮಾಂಧಾತ ಪರ್ವತದ 7.5 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿಮೆ ಮತ್ತು ಶಂಕರ ಮ್ಯೂಸಿಯಂ ಸ್ಥಾಪಿಸಲಾಗುವುದು. ನರ್ಮದಾ ನದಿಯ ಇನ್ನೊಂದು ಬದಿಯಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ ಗುರುಕುಲಂ ಮತ್ತು 10 ಹೆಕ್ಟೇರ್ ಪ್ರದೇಶದಲ್ಲಿ ಆಚಾರ್ಯ ಶಂಕರ್ ಅಂತಾರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವನ್ನು ಅಭಿವೃದ್ಧಿಪಡಿಸಲಾಗುವುದು.

ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಪ್ರತಿಪಕ್ಷ ನಾಯಕ ಕಮಲ್ ನಾಥ್ ಹೇಳಿದ್ದಾರೆ. ಬಜೆಟ್‌ನಲ್ಲಿ ಯೋಜನೆಗೆ ಹಣ ಮೀಸಲಿಟ್ಟಾಗ ಚರ್ಚೆ ನಡೆಸುತ್ತೇವೆ ಎಂದರು.

Advertisement

ಇದನ್ನೂ ಓದಿ:“ಮಠದಲ್ಲಿ ವಾಸ್ತವ್ಯಕ್ಕೆ ಕೊಟ್ಟ ಜಾಗದಲ್ಲಿ ಹಿಡುವಳಿ ಹಕ್ಕು ಪ್ರತಿಪಾದಿಸುವಂತಿಲ್ಲ’

ರಾಜ್ಯದ ಸಾಲವು ಒಟ್ಟು ಬಜೆಟ್ ಹಂಚಿಕೆಗಿಂತ ಹೆಚ್ಚಿರುವ ಸಮಯದಲ್ಲಿ ಶಾಸನದ ಮೇಲಿನ ಈ ವೆಚ್ಚವು ಬರುತ್ತದೆ. ರಾಜ್ಯದ ಬಜೆಟ್ 2.41 ಲಕ್ಷ ಕೋಟಿ ರೂ., ಆದರೆ ಒಟ್ಟು ಸಾಲ  2.56 ಲಕ್ಷ ಕೋಟಿ ರೂ ಇದೆ.

ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಮಾಜಿ ಸಚಿವ, ಕಾಂಗ್ರೆಸ್‌ ನ ಹಿರಿಯ ಮುಖಂಡ ಜಿತು ಪಟ್ವಾರಿ ಮಾತನಾಡಿ, ‘ರಾಜ್ಯದಲ್ಲಿ ಈಗಾಗಲೇ  2.56 ಲಕ್ಷ ಕೋಟಿ ರೂ. ಸಾಲ ಮರುಪಾವತಿಯಾಗಬೇಕಿದೆ ಆದರೆ ಶಿವರಾಜ್ ಸರ್ಕಾರ ಒಂದಲ್ಲ ಒಂದು ನೆಪದಲ್ಲಿ ನಿತ್ಯವೂ ಸಾಲ ಪಡೆಯುತ್ತಿದೆ, ಈಗ 48,000 ಕೋಟಿ ರೂ ಸಾಲ ಪಡೆಯಲು ನಿರ್ಧರಿಸಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next