Advertisement

ಇನ್ನು “ಕುಲಪತಿ’ಯಲ್ಲ, “ಕುಲಗುರು’

11:31 PM Sep 06, 2021 | Team Udayavani |

ಭೋಪಾಲ್‌: ವಿಶ್ವವಿದ್ಯಾಲಯಗಳ ಉನ್ನತ ಹುದ್ದೆಯಾದ “ಕುಲಪತಿ’ ಹೆಸರನ್ನು ಇನ್ನು “ಕುಲಗುರು’ ಎಂದು ಬದಲಾಯಿಸಲು ಮಧ್ಯಪ್ರದೇಶ ಸರಕಾರ ಚಿಂತನೆ ನಡೆಸಿದೆ.

Advertisement

ಈ ಬಗ್ಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಮೋಹನ್‌ ಯಾದವ್‌ ಅವರೇ ಮಾಹಿತಿ ನೀಡಿದ್ದಾರೆ. ಹಿಂದಿಯಲ್ಲಿ ಜಿಲ್ಲಾಧಿಕಾರಿಯನ್ನು “ಜಿಲ್ಲಾಧೀಶ್‌’ ಎಂದು ಕರೆಯುತ್ತಾರೆ. ಇದು “ರಾಜ’ನನ್ನು ಕರೆದಂತೆ ಕೇಳಿಸುತ್ತದೆ. ಅದೇ ರೀತಿ, ಹಿಂದಿಯಲ್ಲಿ ವೈಸ್‌ ಚಾನ್ಸೆಲರ್‌ ಅನ್ನು “ಕುಲಪತಿ’ ಎಂದು ಕರೆಯುತ್ತಾರೆ.

ಆದರೆ ಕುಲಗುರು ಎಂದು ಕರೆಯುವುದರಲ್ಲಿ ಹೆಚ್ಚು ಆಪ್ತತೆಯಿದೆ. ಹೀಗಾಗಿ ಈ ಚಿಂತನೆ ನಡೆಸಿದ್ದು, ಇದರ ಪ್ರಸ್ತಾವವನ್ನು ವಿಧಾನಸಭೆಯ ಮುಂದಿಡಲಾಗುವುದು. ಅನುಮೋದನೆ ಸಿಕ್ಕ ನಂತರ ರಾಜ್ಯದ ಎಲ್ಲ ವಿವಿಗಳ ಕುಲಪತಿಗಳನ್ನು ಕುಲಗುರು ಎಂದೇ ಸಂಬೋಧಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next