Advertisement

ರ‍್ಯಾಗಿಂಗ್ ಕುಚೋದ್ಯ- ದಿಂಬು, ಸಹಪಾಠಿಗಳ ಜತೆ ಸೆಕ್ಸ್‌ ನಟನೆ..!ಪೋಷಕರ ಆಕ್ರೋಶ

02:56 PM Jul 27, 2022 | Team Udayavani |

ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಕಿರಿಯ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ರ‍್ಯಾಗಿಂಗ್ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಇಂದೋರ್‌ನ  ವೈದ್ಯಕೀಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುವ ರೀತಿಯನ್ನು ನೋಡಿ ಕಿರಿಯ ವಿದ್ಯಾರ್ಥಿಗಳು ಆಘಾತಕ್ಕೀಡಾಗಿದ್ದು, ಈ ಕುರಿತು ಯುಜಿಸಿ ಆ್ಯಂಟಿ ರ‍್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮಗಾದ ಭಯಾನಕ ಅನುಭವವನ್ನು ತೋಡಿಕೊಂಡಿದ್ದಾರೆ.

ಸರ್ಕಾರಿ ಮೆಡಿಕಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಜೂನಿಯರ್​​ಗಳ ತರಗತಿಗಳಿಗೆ ತೆರಳಿ ದಿಂಬುಗಳು ಮತ್ತು ಬ್ಯಾಚ್‌ಮೇಟ್‌ಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ನಟಿಸಲು ಸೂಚಿಸಿದ್ದಾರೆ. ಇದರಿಂದ ಕೆಲವರು ತೀವ್ರವಾಗಿ ಮುಜುಗರಗೊಂಡು ಆಘಾತಕ್ಕೀಡಾಗಿದ್ದಾರೆ. ಇನ್ನೂ ಕೆಲವರು ಸೀನಿಯರ್ಸ್​ ಹೇಳಿದಂತೆ ಮಾಡಿ ನಗೆಪಾಟಲಿಗೀಡಾಗಿದ್ದಾರೆ.

​​ರ‍್ಯಾಗಿಂಗ್ ಕಾಟದಿಂದ ಈ ಹಿಂದೆ ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದಿವೆ. ಹೀಗಾಗಿ, ಶಾಲಾ- ಕಾಲೇಜುಗಳಲ್ಲಿ ರ‍್ಯಾಗಿಂಗ್ ನಿಷೇಧಿಸಲಾಗಿದ್ದರೂ, ಇಂದೋರ್​​ನ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ರ‍್ಯಾಗಿಂಗ್ ಇದೀಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಪ್ರವೀಣ್‌ ಹತ್ಯೆ ಖಂಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಸದಸ್ಯರು

Advertisement

ಕೆಲವು ಪ್ರಾಧ್ಯಾಪಕರಿಗೆ ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದು, ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡುವ ರ‍್ಯಾಗಿಂಗ್ ​ವಿರುದ್ಧ ಕ್ರಮ ಕೈಗೊಳ್ಳಲು ಕಾಲೇಜಿಗೆ ಯುಜಿಸಿ ಸೂಚಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next