ಭೋಪಾಲ್: ಸರ್ಕಾರಿ ಪ್ರಾಥಮಿಕ ಕೇಂದ್ರದ ವೈದ್ಯ ಸಕಾಲಕ್ಕೆ ಆಗಮಿಸದ ಪರಿಣಾಮ ತಾಯಿಯ ಮಡಿಲಲ್ಲೇ ಐದು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೃದಯಸ್ಪರ್ಶಿ ಸಂದೇಶದೊಂದಿಗೆ ಜೆರ್ಸಿ ಗಿಫ್ಟ್ ನೀಡಿದ ಹಾಂಕಾಂಗ್ ತಂಡ
ಸಂಜಯ್ ಪಾಂಡ್ರೆ ಮತ್ತು ಕುಟುಂಬ ಸದಸ್ಯರು ಐದು ವರ್ಷದ ಪುಟ್ಟ ಮಗು ರಿಷಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆರೋಗ್ಯ ಕೇಂದ್ರ ಹೊರಗೆ ಗಂಟೆಗಟ್ಟಲೇ ಕಾದು ಕುಳಿತಿದ್ದರೂ ಕೂಡಾ ವೈದ್ಯರು ಆಗಮಿಸಿರಲಿಲ್ಲವಾಗಿತ್ತು. ಈ ವೇಳೆಯಲ್ಲಿಯೇ ಮಗು ತಾಯಿಯ ಮಡಿಲಲ್ಲೇ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಈ ಘಟನೆ ಮೂಲಕ ಮತ್ತೊಮ್ಮೆ ಮಧ್ಯಪ್ರದೇಶದಲ್ಲಿನ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿನ ಬೇಜವಾಬ್ದಾರಿತನ ಮತ್ತು ಅಸಡ್ಡೆ ಬಯಲಾಗಿದ್ದು, ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ರೋಗಿ(ಮಗುವಿಗೆ)ಗೆ ಚಿಕಿತ್ಸೆ ನೀಡಲು ವಿಳಂಬವಾಗಿದ್ದೇಕೆ ಎಂಬ ಬಗ್ಗೆ ಆರೋಗ್ಯ ಕೇಂದ್ರದ ವೈದ್ಯರು ಕಾರಣವನ್ನು ನೀಡಿದ್ದಾರೆ. ತಮ್ಮ ಪತ್ನಿ ಹಿಂದಿನ ದಿನ ಉಪವಾಸ ವೃತ ಕೈಗೊಂಡಿದ್ದು, ದೈನಂದಿನ ಕೆಲಸದಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ಆರೋಗ್ಯ ಕೇಂದ್ರ ತಲುಪಲು ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿರುವುದಾಗಿ ವರದಿ ಹೇಳಿದೆ.