Advertisement

ಕೃಷಿ ಭೂಮಿ ಬರಡುಬಿಟ್ಟರೆ ರಾಷ್ಟ್ರಕ್ಕೆ ನಷ್ಟ: ಸಚಿವ ಮಾಧುಸ್ವಾಮಿ

06:38 PM Jul 04, 2021 | Team Udayavani |

ಉಡುಪಿ: ಕೃಷಿ ಭೂಮಿ ಇದ್ದು ಚಟುವಟಿಕೆ ಮಾಡದಿದ್ದರೆ ರಾಷ್ಟ್ರಕ್ಕೆ ನಷ್ಟ. ರೈತರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕೃಷಿಕರಿಗೆ ಉತ್ತೇಜನ ನೀಡುವುದು ಸರಕಾರದ ಜವಾಬ್ದಾರಿ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವ ಮಾಧು ಸ್ವಾಮಿ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕೃಷಿ ಚಟುವಟಿಕೆಗಳು ದುಬಾರಿಯಾಗಿದೆ. ಸರಕಾರ ನೆರವು ನೀಡಿದರೆ ಲಾಭದಾಯಕವಾಗಲಿದೆ. ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ ವಲಸೆ ಬದುಕು ನಿವಾರಣೆಯಾಗಲಿದೆ. ಈ ಬಗ್ಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಅರಿವು ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದರು.

ಕರಾವಳಿಗೆ ಬೃಹತ್‌ ನೀರಾವರಿಗೆ ಪ್ರೋತ್ಸಾಹ ಇಲ್ಲ. ವಾರಾಹಿ ಅನಂತರ ಯಾವುದೇ ಯೋಜನೆಗಳಿಲ್ಲ. ಸಣ್ಣ ನೀರಾವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದರು.

ಇದನ್ನೂ ಓದಿ : ಮಾಜಿ ಸಂಸದ ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು

Advertisement

ಎತ್ತಿನಹೊಳೆ ಯೋಜನೆ ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಜಮೀನು ಒತ್ತುವರಿ ಕೆಲಸವಾಗಿಲ್ಲ. ಕೆಲವು ತೊಡಕುಗಳನ್ನು ಇತ್ಯರ್ಥಪಡಿಸಿಕೊಂಡು ಕೆಲಸ ಮುಗಿಸಲಾಗುವುದು ಎಂದರು.

ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ
ಎಲ್ಲ ಪಕ್ಷಗಳಿಗೂ ತಮ್ಮ ಪಕ್ಷವನ್ನು ವಿಸ್ತರಿಸುವ ಉದ್ದೇಶವಿರುತ್ತದೆ.ಬಿಜೆಪಿ ಪಕ್ಷಕ್ಕೂ ಯಾರು ಬೇಕಾದರೂ ಬರಬಹುದು. ಅಲ್ಲಿಯವರು ನಮ್ಮ ಪಕ್ಷಕ್ಕೆ ಬಂದರೂ ನಾವು ಸ್ವಾಗತ ಮಾಡುತ್ತೇವೆ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.

ಬೆಲೆ ಕಟ್ಟಲಾಗದ ನಿರ್ಧಾರ
ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರೆ ಒಳ್ಳೆಯದಾಗುವುದಿಲ್ಲ ಎಂದು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಎಚ್ಚರಿಕೆ ನೀಡಿದರು. ದೇಶದಲ್ಲಿ 80 ಕೋಟಿ ಮಂದಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದಕ್ಕಾಗಿ ರಾಜ್ಯ ಸರಕಾರ 2 ಸಾವಿರ ಕೋ.ರೂ.ತೆಗೆದಿಟ್ಟಿದೆ. ಇದರ ಜತೆಗೆ ಹೆಚ್ಚುವರಿ ಆಹಾರಗಳನ್ನೂ ಒದಗಿಸಲಾಗಿದೆ. ವಿಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರೂ ಇಲ್ಲ. ಆದರೆ ನೈಸರ್ಗಿಕ ಆಪತ್ತಿನ ಕಾಲದಲ್ಲಿ ಟೀಕೆ ಮಾಡುವುದು ತರವಲ್ಲ. ಲಸಿಕೆ ಉತ್ಪಾದಿಸಲು ಕಂಪೆನಿಯವರಿಗೆ ಕಾಲಾವಕಾಶ ನೀಡಬೇಕು ಎಂದರು.

ಜಾರಕಿಹೊಳೆ ಅವರಿಗೆ ಪಕ್ಷದ ಕಡೆಯಿಂದ ಯಾವುದೇ ತೊಂದರೆಯಿಲ್ಲ. ಆಕಸ್ಮಿಕ ಘಟನೆಯಿಂದಾಗಿ ಅವರು ಬಲಿಪಶುವಾಗಿದ್ದಾರೆ. ಅವರು ರಾಜೀನಾಮೆ ನೀಡುವುದು ಉತ್ತಮವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next