ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಈ ಬಗ್ಗೆ ಕೂ ವೇದಿಕೆಯಲ್ಲಿ ಹಂಚಿಕೊಂಡಿರುವ ಅವರು, ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದೆ. ದೇವರ ದರ್ಶನ ತುಂಬಾ ಚೆನ್ನಾಗಿ ಆಯಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Watch Video: ಸತ್ಯಮಂಗಲ ಅಭಯಾರಣ್ಯ- ಮರಿಯಾನೆಗೆ ಝಡ್ ಪ್ಲಸ್ ಭದ್ರತೆ ನೀಡಿದ ಗಜಪಡೆ
ನಿರ್ದೇಶನದಲ್ಲಿ ಛಾಪು ಮೂಡಿಸಿರುವ ಮಧುರ್ ಭಂಡಾರ್ಕರ್ ಅವರು, ಫ್ಯಾಶನ್ (2008), ಜೈಲ್ (2009), ದಿಲ್ ತೋ ಬಚ್ಚಾ ಹೈ ಜಿ (2011), ಹೀರೋಯಿನ್ (2012), ಇಂದು ಸರ್ಕಾರ (2017), ಕ್ಯಾಲೆಂಡರ್ ಗಲ್ರ್ಸ್ (2015) ಸೇರಿದಂತೆ ಹಲವು ಉತ್ತಮ ಸಿನಿಮಾಗಳನ್ನು ಬಾಲಿವುಡ್ ಜಗತ್ತಿಗೆ ನೀಡಿದ್ದಾರೆ. ಅವರು ನಿರ್ಮಿಸಿದ್ದ ಅವಿಜಾತ್ರಿಕ್ ಚಿತ್ರವು 2021ರಲ್ಲಿ ತೆರೆಕಂಡಿತ್ತು.
Related Articles