Advertisement

ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ

07:32 PM Feb 01, 2023 | Team Udayavani |

ಕೊರಟಗೆರೆ: ತನ್ನ ಸ್ವಂತ ಅಜ್ಜಿಯನ್ನೇ ಮನೆಯಿಂದ ಹೊರಹಾಕಿದ ಮೊಮ್ಮಗ, ನ್ಯಾಯಕ್ಕಾಗಿ ಮಧುಗಿರಿ ಎಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅಜ್ಜಿ ಕಾವಲಮ್ಮ, ಬೀದಿ ಪಾಲಾಗಿದ್ದ ವಯೋವೃದ್ದೆ ಅಜ್ಜಿಗೆ ಆಸರೆಯಾದ ಮಧುಗಿರಿ ಎಸಿ ನ್ಯಾಯಾಲಯ, ಹಿರಿಯ ನಾಗರೀಕ ಕಾಯ್ದೆಯ ಅನ್ವಯ ಅಜ್ಜಿಯ ಪರವಾಗಿ ಆದೇಶ ಬಂದಿದ್ದು ಅದರಂತೆ ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರ ಭದ್ರತೆಯಲ್ಲಿ ಅಜ್ಜಿ ಮತ್ತೇ ಮನೆ ಸೇರುವಂತಾಗಿದೆ.

Advertisement

ಕೊರಟಗೆರೆ ಪಟ್ಟಣದ ೩ನೇ ವಾರ್ಡಿನ ಹನುಮಂತಪುರ ವಾಸಿಯಾದ ಲೇ.ರಾಮಯ್ಯನ ಮಡದಿಯಾದ ಕಾವಲಮ್ಮ ಎನ್ನುವ ವೃದ್ದೆಯ ತನ್ನ ಮಗಳಾದ ಲೇ. ಲಕ್ಷ್ಮಮ್ಮನ ಮಗನಾದ ಮಾರುತಿ ಎಂಬಾತ ಕಳೆದ 6 ತಿಂಗಳ ಹಿಂದೆಯಷ್ಟೆ ಮನೆಯಿಂದ ಹೊರಹಾಕಿದ ದಾರುಣ ಘಟನೆ ನಡೆದಿದೆ. ಹಿರಿಯ ನಾಗರೀಕ ಕಾಯ್ದೆಯಂತೆ ವಯೋವೃದ್ದೆ ಅಜ್ಜಿಯು ಮತ್ತೇ ಪೊಲೀಸರ ಭದ್ರತೆಯಲ್ಲಿ ಮನೆ ಸೇರಿದ್ದಾರೆ.

ವಯೋವೃದ್ದೆ ಕಾವಲಮ್ಮ ನ್ಯಾಯಕ್ಕಾಗಿ ವಿಶೇಷ ಚೇತನ ಮಗನ ಜೊತೆಗೂಡಿ ಮನೆಗಾಗಿ ಕೊರಟಗೆರೆ ತಹಶೀಲ್ದಾರ್ ಮೂಲಕ ಮಧುಗಿರಿ ಎಸಿ ನ್ಯಾಯಾಲಯಕ್ಕೆ ಕಳೆದ 6 ತಿಂಗಳ ಹಿಂದೆಯಷ್ಟೆ ಅರ್ಜಿ ಸಲ್ಲಿಸುತ್ತಾರೆ. ಮನೆ ಕಂದಾಯ, ಮನೆ ಕ್ರಯ, ವಿದ್ಯುತ್ ಪಾವತಿ ಶುಲ್ಕದ ರಸಿದಿ ಪತ್ರ ಸೇರಿದಂತೆ ಇನ್ನೀತರ ದಾಖಲೆ ಪರಿಶೀಲಿಸಿದ ಮಧುಗಿರಿ ಎಸಿ ನ್ಯಾಯಾಲಯವು 78 ವರ್ಷ ವಯಸ್ಸಿನ ಕಾವಲಮ್ಮನ ಪರವಾಗಿ ತೀರ್ಪುನೀಡಿ ಆದೇಶ ಮಾಡಿದ್ದಾರೆ.

ಮಧುಗಿರಿ ಉಪವಿಭಾಗಾಧಿಕಾರಿ ರಿಸಿ ಆನಂದ್‌ರವರ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ಪೊಲೀಸ್ ಇಲಾಖೆಯ ಎಎಸೈ ಧರ್ಮೆಗೌಡ, ರಾಮಚಂದ್ರಪ್ಪ ಸೇರಿದಂತೆ ಕಂದಾಯ ಇಲಾಖೆಯ ಪ್ರತಾಪ್‌ಕುಮಾರ್, ಬಸವರಾಜು, ಪವನಕುಮಾರ್, ರಘು ನೇತೃತ್ವದ ಪೊಲೀಸರ ತಂಡ ವಯೋವೃದ್ದೆ ಅಜ್ಜಿ ಕಾಮಲಮ್ಮ ಮತ್ತು ವಿಶೇಷ ಚೇತನ ಬೈರೇಗೌಡನಿಗೆ ಮತ್ತೇ ಮನೆ ಹಸ್ತಾಂತರ ಮಾಡುವಲ್ಲಿ ಯಶಸ್ವಿ ಆಗಿರುವ ಘಟನೆ ನಡೆದಿದೆ.

ಮನೆಮುಂದೆ ಮೊಮ್ಮಗನ ಹೈಡ್ರಾಮ..
ವಯೋವೃದ್ದೆ ಅಜ್ಜಿಯಾದ ಕಾವಲಮ್ಮ ಮನೆಯ ಹಸ್ತಾಂತರಕ್ಕೆ ಮನೆಯ ಹತ್ತಿರ ಬಂದ ತಹಶೀಲ್ದಾರ್ ಮತ್ತು ಪೊಲೀಸರ ಮುಂದೆಯೇ ಅಜ್ಜಿಯ ಮೊಮ್ಮಗ ಮಾರುತಿ ಎಂಬಾತ ಹೈಡ್ರಾಮ ಸೃಷ್ಟಿಸಿದ್ದಾರೆ. ಮತ್ತೇ ಅಜ್ಜಿಗೆ ಭಯಗೊಳಿಸುವ ರೀತಿಯಲ್ಲಿ ಯುವಕರನ್ನು ಸೇರಿಸಿ ಗಲಾಟೆ ಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಪೊಲೀಸರ ತಂಡ ಪುಂಡ ಯುವಕರಿಗೆ ಬಿಸಿಮುಟ್ಟಿಸಿ ಮನೆಯನ್ನು ಕಾಲಿ ಮಾಡಿಸಿ ಅಜ್ಜಿಗೆ ಹಸ್ತಾಂತರ ಮಾಡಿರುವ ಘಟನೆಯು ನಡೆದಿದೆ.

Advertisement

ನನ್ನ ಮೊಮ್ಮಗ ಮಾರುತಿ ಎಂಬಾತ ನನಗೇ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗಡೆ ಹಾಕಿದ. ಏನು ತಿಳಿಯದ ನನ್ನ ವಿಶೇಷ ಚೇತನ ಮಗನಿಗೆ ನಾನೇ ದಿಕ್ಕು. ಮತ್ತೇ ನನಗೇ ಏನಾದ್ರು ಸಮಸ್ಯೆ ಆದರೇ ಅದಕ್ಕೆ ಮಾರುತಿನೇ ಪ್ರಮುಖ ಕಾರಣ. ಮಧುಗಿರಿ ಎಸಿ, ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರಿಗೆ ದೇವರು ಒಳ್ಳೆಯದು ಮಾಡಲಿ.
– ಕಾವಲಮ್ಮ. ವಯೋವೃದ್ದೆ. ಕೊರಟಗೆರೆ

ಮನೆಗಾಗಿ ಮೊಮ್ಮಗನ ವಿರುದ್ದ ವಯೋವೃದ್ದೆ ಅಜ್ಜಿಯು ದೂರು ನೀಡಿದ್ದಾರೆ. ಹಿರಿಯ ನಾಗರೀಕರ ಕಾಯ್ದೆಯಡಿ ಅಜ್ಜಿಯ ಪರವಾಗಿ ಮಧುಗಿರಿ ಎಸಿ ನ್ಯಾಯಾಲಯ ಆದೇಶ ಮಾಡಿದೆ. ಹಿರಿಯ ನಾಗರೀಕರ ರಕ್ಷಣೆ ಮತ್ತು ಪೋಷಣೆ ನಮ್ಮೇಲ್ಲರ ಪ್ರಮುಖ ಕರ್ತವ್ಯ. ವಯೋವೃದ್ದೆ ಕಾಮಲಮ್ಮನಿಗೆ ಮತ್ತೇ ಏನಾದ್ರು ತೊಂದರೇ ಆದ್ರೇ ತಕ್ಷಣ ನಾವು ಸ್ಥಳಕ್ಕೆ ಬರುತ್ತೇವೆ.
– ನರಸಿಂಹಮೂರ್ತಿ. ತಹಶೀಲ್ದಾರ್. ಕೊರಟಗೆರೆ

ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಶಕ್ತಿ ತುಂಬಿದೆ: ಬಾಲಚಂದ್ರ ಜಾರಕಿಹೊಳಿ 

Advertisement

Udayavani is now on Telegram. Click here to join our channel and stay updated with the latest news.

Next