Advertisement

ಕಾರು ಟೈರ್‌ ಸ್ಫೋಟ: ಪವಾಡ ಸದೃಶ ಪಾರಾದ ಮಧು ಕೋಡಾ

05:09 PM Aug 26, 2017 | udayavani editorial |

ಜಮ್‌ಶೇದ್‌ಪುರ : ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿನ ಟಯರ್‌ ಸ್ಫೋಟಗೊಂಡ ಹೊರತಾಗಿಯೂ ಅವರೆಲ್ಲರೂ ಪವಾಡ ಸದೃಶ ಪಾರಾದ ಘಟನೆ ವರದಿಯಾಗಿದೆ.

Advertisement

ಪಶ್ಚಿಮ ಸಿಂಘಭೂಮ್‌ ಜಿಲ್ಲೆಯ ಚಕ್ರಧಾರಪುರ ಬ್ಲಾಕ್‌ನ ಕರಂಜೋ ಎಂಬಲ್ಲಿಗೆ ಸಮೀಪ ಕೋಡಾ ಅವರ ಕಾರಿನ ಒಂದು ಟೈರ್‌ ನ್ಪೋಟಗೊಂಡಿತು. ಆದರೂ ಅದೃಷ್ಟವಶಾತ್‌ ಕಾರು ಪಲ್ಟಿಯಾಗದ ಕಾರಣ ಎಲ್ಲರೂ ಪಾರಾದರು. ಕಾರಿನಲ್ಲಿ ಮಧು ಕೋಡಾ, ಅವರ ಶಾಸಕಿ ಪತ್ನಿ ಗೀತಾ ಮತ್ತು ಪುತ್ರಿ ಇದ್ದರು. ಕೋಡಾ ಅವರು ಮಝಗಾಂವ್‌ನಲ್ಲಿ ಫ‌ುಟ್ಬಾಲ್‌ ಪಂದ್ಯ ವೀಕ್ಷಿಸಲು ಮುಖ್ಯ ಅತಿಥಿಯಾಗಿ ಹೋಗುತ್ತಿದ್ದರು ಎಂದು ಎಸ್‌ಪಿ ಅನೀಶ್‌ ಗುಪ್ತಾ ತಿಳಿಸಿದ್ದಾರೆ. 

ಅವಘಡದ ಬಳಿಕ ಕೋಡಾ ಮತ್ತು ಅವರ ಕುಟುಂಬದವರು ಬೇರೊಂದು ಕಾರಿನಲ್ಲಿ  ಗಮ್ಯ ತಾಣವನ್ನು ತಲುಪಿದರು. 

ಕೋಡಾ ಅವರ ಪತ್ನಿ ಗೀತಾ ಪಶ್ಚಿಮ ಸಿಂಘಭೂಮ್‌ನ ಜಗನ್ನಾಥಪುರ ಕ್ಷೇತ್ರದಿಂದ ಜಯಿಸಿರುವ ಪಕ್ಷೇತರ ಶಾಸಕಿ. 

Advertisement

Udayavani is now on Telegram. Click here to join our channel and stay updated with the latest news.

Next