Advertisement

ಫೆಬ್ರವರಿ ಇಲ್ಲವೆ ಮಾರ್ಚ್‌ನಲ್ಲಿ ಕಾಂಗ್ರೆಸ್‌ ನಿಂದ ಬೃಹತ್ ಸಮಾವೇಶ: ಮಧು ಬಂಗಾರಪ್ಪ

05:45 PM Dec 13, 2022 | Team Udayavani |

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಮುಖ್ಯ ಪ್ರಣಾಳಿಕೆ ಜತೆಗೆ  ಪ್ರದೇಶವಾರು ಪ್ರಣಾಳಿಕೆ ರೂಪಿಸಲಾಗುತ್ತಿದ್ದು, ಫೆಬ್ರವರಿ ಇಲ್ಲವೆ ಮಾರ್ಚ್‌ನಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಕೆಪಿಸಿಸಿ ಒಬಿಸಿ ಘಟಕ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಗುವ ಮತದಾನದಲ್ಲಿ ಶೇ.52-55 ರಷ್ಟು ಒಬಿಸಿ ಮತದಾರರಿದ್ದಾರೆ.

ರಾಜ್ಯದಲ್ಲಿನ ಸಣ್ಣ ಸಣ್ಣ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಮುಂಚೂಣಿಗೆ ತರುವುದು, ಪ್ರತಿ ಜಿಲ್ಲೆಯಲ್ಲೂ ಒಬಿಸಿ ಸಮಾವೇಶ ಮಾಡಲಾಗುತ್ತದೆ . ಅಂತಿಮವಾಗಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ:ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ಸಮಯ ಸಾಧಕತನ: ಛಲವಾದಿ ನಾರಾಯಣಸ್ವಾಮಿ

ಧರ್ಮ-ಜಾತಿಯಾಧಾರದಲ್ಲಿ ಅಧಿಕಾರಕ್ಕೆ  ಬಂದಿದ್ದು, ಇದೀಗ ಜಾತಿ ಒಡೆಯುವ, ರೈತ ವಿರೋಧಿ ನೀತಿ, ಭ್ರಷ್ಟಾಚಾರ ಆಡಳಿತದಲ್ಲಿ  ತೊಡಗಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ರೈತರಿಗೆ ಭತ್ತ ಬೆಳೆಗೆ 500 ರೂ. ಪ್ರೋತ್ಸಾಹ ನೀಡುತ್ತಿದ್ದು, ಉಳಿದ ಭಾಗದ ರೈತರಿಗೇಕಿಲ್ಲ ಎಂದು ಪ್ರಶ್ನಿಸಿದರು.

Advertisement

ಮುಂಬರುವ ವಿಧಾನಸಭೆ ಚುನಾವಣೆಗೆ, ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ತಯಾರು ಸಮಿತಿ ರಚಿಸಲಾಗಿದ್ದು, ನಾನು ಉಪಾಧ್ಯಕ್ಷನಾಗಿದ್ದಾನೆ. ಪ್ರಣಾಳಿಕೆ ನಿಟ್ಟಿನಲ್ಲಿ ಐದಾರು ಸಭೆಗಳು ಆಗಿವೆ. ಮುಖ್ಯ ಪ್ರಣಾಳಿಕೆ ಜತೆಗೆ ಪ್ರದೇಶವಾರು ಪ್ರಣಾಳಿಕೆ ರಚಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಚುನಾವಣೆಯಲ್ಲಿ ಒಬಿಸಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕೆ ಮನವಿ ಮಾಡಲಾಗುವುದು. ಪಕ್ಷದ ತೀರ್ಮಾನಕ್ಜೆ ಬದ್ದ ಎಂದು ನುಡಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ತೀರ್ಮಾನ ದಿಂದ ಒಬಿಸಿ ಮತಬ್ಯಾಂಕ್ ಛಿದ್ರ ಮಾಡುತ್ತೇವೆ ಎಂದು ಬಿಜೆಪಿ ಭಾವಿಸಿದರೆ ಆ ಪಕ್ಷದ ದಡ್ಡತನ. ಬಿಜೆಪಿ ನಡೆಸುವ ಸಮಾವೇಶಕ್ಕೆ ಹಣ, ಬಿರಿಯಾನಿ ನೀಡಿದರು, ಜನ ಬರುತ್ತಿಲ್ಲವಾಗಿದ್ದಾರೆ. ಅಷ್ಟೇ ಅಲ್ಲ  ಬಿಜೆಪಿ ಸಮಾವೇಶಕ್ಕೆ, ಇಷ್ಟು ಹಣ ನೀಡುತ್ತೇನೆಂದು ಅದರಲ್ಲಿಯೂ ಕಡಿಮೆ ನೀಡಿ ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣದಲ್ಲೂ ಭ್ರಷ್ಟಾಚಾರ ಮಾಡುವ ಪಕ್ಷ ಬಿಜೆಪಿಯಾಗಿದೆ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next