Advertisement

ಹಿಂದುತ್ವ ಆಧಾರದ ಧ್ರುವೀಕರಣ ಕ್ಷೀಣ: ಮಧು ಬಂಗಾರಪ್ಪ

12:06 AM Nov 13, 2022 | Team Udayavani |

ಮಂಗಳೂರು: ಬಿಜೆಪಿಯವರು ಅಧಿಕಾರ ಕ್ಕಾಗಿ ಹಿಂದುತ್ವದ ಆಧಾರದಲ್ಲಿ ನಡೆಸಿದ್ದ ಧ್ರುವೀಕರಣ ಈಗ ಕಡಿಮೆಯಾಗುತ್ತಿದ್ದು ಯುವ ಜನತೆ ಕೂಡ ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.

Advertisement

ಶನಿವಾರ ಜಿಲ್ಲಾ ಕಾಂಗ್ರೆಸ್‌ ಭವನ ದಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2014ರಲ್ಲಿ ಮೋದಿಯವರು ಪ್ರಧಾನಿಯಾದಾಗ ಹಿಂದುತ್ವ ಬೆಳೆಯಿತು. 2018ವರೆಗೆ ಧ್ರುವೀ ಕರಣ ಉನ್ನತ ಮಟ್ಟದಲ್ಲಿತ್ತು. ಬಳಿಕ ಕಡಿಮೆಯಾಗುತ್ತಾ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಬಗ್ಗೆ ವರದಿಗಳು ತಿಳಿಸಿವೆ ಎಂದರು.

ಶೇ. 100 ಕಮಿಷನ್‌
ಸುರತ್ಕಲ್‌ ಟೋಲ್‌ಗೇಟ್‌ ವಿಚಾರವಾಗಿ ಮಾತನಾಡಿದ ಮಧು ಅವರು, ಟೋಲ್‌ಗೇಟ್‌ನಿಂದ ಶಾಸಕ, ಸಂಸದರಿಗೆ ಶೇ. 40 ಅಲ್ಲ, ಶೇ. 100 ಕಮಿಷನ್‌ ಹೋಗುತ್ತಿದೆ. ಇಲ್ಲದಿದ್ದರೆ ಅದನ್ನು ಮುಚ್ಚುತ್ತಿದ್ದರು ಎಂದರು. ಟೋಲ್‌ಗೇಟ್‌ ವಿರುದ್ಧ ಪ್ರತಿ ಭಟನೆ ನಡೆಸಿದವರ ಮೇಲೆ ಬಿಜೆಪಿಯವರು ದೌರ್ಜನ್ಯ ನಡೆಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು ಎಂದು ಹೇಳಿದರು.

ಕಿತ್ತುಕೊಳ್ಳಬಾರದು
2 ಎ ವರ್ಗಕ್ಕೆ ಜಾತಿಗಳ ಸೇರ್ಪಡೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಂ ದಲೋ ಕಿತ್ತುಕೊಂಡು ಇನ್ನೊಬ್ಬರಿಗೆ ನೀಡಬಾರದು. ಅದು ಸೂಕ್ಷಮವಾದ ವಿಚಾರ. ಯಾವುದೇ ಮೀಸಲಾತಿ, ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.

Advertisement

ಕಾರ್ಮಿಕ ವಿರೋಧಿ ಕಾನೂನು
ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ ಮಾತನಾಡಿ, ನರೇಂದ್ರ ಮೋದಿ ಸರಕಾರ ಕಾರ್ಖಾನೆ ಮಾಲಕರಿಗೆ, ಬಂಡವಾಳ ಶಾಹಿಗಳಿಗೆ ಮಾತ್ರ ಅನುಕೂಲವಾಗುವಂತೆ ಕಾರ್ಮಿಕ ಕಾನೂನುಗಳನ್ನು ಪರಿವರ್ತನೆ ಮಾಡಿದೆ. ಕಾರ್ಮಿಕರಿಗೆ ರಕ್ಷಣೆ ಇಲ್ಲವಾಗಿದೆ. ಮುನ್ಸೂಚನೆ ಇಲ್ಲದೆಯೇ ಕೈಗಾರಿಕೆಯನ್ನು ಮುಚ್ಚಲಾಗುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್‌, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿಶ್ವಾಸ್‌ ಕುಮಾರ್‌ ದಾಸ್‌, ಕಾರ್ಮಿಕ ಘಟಕದ ರಾಜ್ಯ ಪದಾಧಿಕಾರಿ ಅಬ್ದುಲ್‌ ರೆಹಮಾನ್‌, ಹಿಂದುಳಿದ ವರ್ಗದ ಪದಾಧಿಕಾರಿ ಪ್ರತಿಭಾ ಕುಳಾç ಪತ್ರಿಕಾಗೋಷ್ಠಿಯಲ್ಲಿದ್ದರು.

ಜಿಲ್ಲೆಯಲ್ಲಿ ಹಿಂದುಳಿದ
ವರ್ಗಗಳ ಸಮಾವೇಶ
ಉಡುಪಿ: ಕಾಂಗ್ರೆಸ್‌ನ ಎಲ್ಲ ಯೋಜನೆಗಳು ಹಿಂದುಳಿದ ವರ್ಗಗಳ ಪರವಾಗಿವೆ ಮತ್ತು ಬದಲಾವಣೆಯ ಗಾಳಿ ಬೀಸುತ್ತಿದ್ದು ಭವಿಷ್ಯದಲ್ಲಿ ಇದು ಕಾಂಗ್ರೆಸ್‌ಗೆ ವರವಾಗಲಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಪ್ರಮುಖರಾದ ರಾಜು ಪೂಜಾರಿ, ಶಿವಾಜಿ ಸುವರ್ಣ, ಗೀತಾ ವಾಗ್ಲೆ, ಇಸ್ಮಾಯಿಲ್‌ ಅತ್ರಾಡಿ, ಬಿ. ನರಸಿಂಹಮೂರ್ತಿ, ಬಿ. ಕುಶಲ್‌ ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಖ್ಯಾತ್‌ ಶೆಟ್ಟಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಜಯ ಕುಮಾರ್‌, ಕಿಶೋರ್‌ ಕುಮಾರ್‌ ಎರ್ಮಾಳ್‌, ಶಂಕರ್‌ ಕುಂದರ್‌, ಉದ್ಯಾವರ ನಾಗೇಶ್‌ ಕುಮಾರ್‌, ಸುನಿಲ್‌ ಬಂಗೇರ, ಪ್ರಶಾಂತ ಜತ್ನನ್ನ, ಹರೀಶ್‌ ಶೆಟ್ಟಿ ಪಾಂಗಾಳ, ಎಲ್ಲೂರು ಶಶಿಧರ ಶೆಟ್ಟಿ, ಸುರೇಶ್‌ ಶೆಟ್ಟಿ ಬನ್ನಂಜೆ, ಶಶಿಧರ್‌, ಗಣೇಶ್‌ ನೆರ್ಗಿ, ಹಮೀದ್‌ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರ. ಕಾರ್ಯದರ್ಶಿ ಅಣ್ಣಯ್ಯ ಸೇರಿಗಾರ್‌ ಸ್ವಾಗತಿಸಿ, ಹಿಂದುಳಿದ ವರ್ಗಗಳ ಘಟಕದ ಕುಶ ಮೂಲ್ಯ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರು ನಿರೂಪಿಸಿದರು.

ಟೋಲ್‌ ಪ್ರತಿಭಟನೆಯಲ್ಲಿ ಭಾಗಿ
ಎನ್‌ಐಟಿಕೆ ಟೋಲ್‌ಗೇಟ್‌ ವಿರೋಧಿ ಸಮಿತಿ 16 ದಿನ ಗಳಿಂದ ನಡೆಸು ತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಧು ಬಂಗಾರಪ್ಪ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next