Advertisement

ವಿನೋದ್‌ ಪ್ರಭಾಕರ್‌ ಎದುರು ತೊಡೆ ತಟ್ಟಿದ ಶ್ರೀನಗರ ಕಿಟ್ಟಿ!

11:38 AM Sep 21, 2022 | Team Udayavani |

ನಟ ವಿನೋದ್‌ ಪ್ರಭಾಕರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ನೂತನ ಚಿತ್ರ “ಮಾದೇವ’. ನವೀನ್‌ ರೆಡ್ಡಿ ಬಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಮಾದೇವ’ ಸಿನಿಮಾಕ್ಕೆ ಆರ್‌. ಕೇಶವ್‌ ದೇವಸಂದ್ರ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೇಕಡ 50 ರಷ್ಟು ಚಿತ್ರೀಕರಣ ಮುಗಿಸಿರುವ ಈ ಸಂದರ್ಭದಲ್ಲಿ “ಮಾದೇವ’ ಚಿತ್ರತಂಡದ ಕಡೆಯಿಂದ ಹೊಸದೊಂದು ಅಪದಡೇಟ್‌ ಹೊರ ಬಂದಿದೆ. ಅದೇನೆಂದರೆ, ಸಿನಿಮಾಕ್ಕೆ ಖಡಕ್‌ ವಿಲನ್‌ ಒಬ್ಬರ ಎಂಟ್ರಿಯಾಗಿದೆ.

Advertisement

ಅವರೇ ಶ್ರೀನಗರ ಕಿಟ್ಟಿ. ಹೌದು, 80ರ ದಶಕದ ಕಥೆಯನ್ನು ಒಳಗೊಂಡಿರುವ “ಮಾದೇವ’ ಚಿತ್ರದಲ್ಲಿ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ನಾಯಕನಾಗಿ ನಟಿಸಿದ್ದು, ವಿನೋದ್‌ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. ವಿನೋದ್‌ ಎದುರು ಶ್ರೀನಗರ ಕಿಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದು, ಸಮುದ್ರ ಎಂಬ ಪವರ್‌ ಫ‌ುಲ್‌ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್‌ ಸ್ಟಾರ್‌ ಆಗಿ ಅಬ್ಬರಿಸಲಿದ್ದಾರೆ.

ಈ ಹಿಂದೆ “ಭಂಟಿ’ ಎಂಬ ಚಿತ್ರ ನಿರ್ಮಿಸಿದ್ದ, ಆರ್‌. ಕೇಶವ್‌ ದೇವಸಂದ್ರ “ಮಾದೇವ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, “ಲವ್‌ ಗುರು’ ಸಮಂತ್‌ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ಗೆ ಜೋಡಿಯಾಗಿ ಸೋನಲ್‌ ಮೊಂಥೆರೋ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಶೃತಿ, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ ಮುಂತಾದವರು ಇತರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್‌ ಸಂಗೀತ ಸಂಯೋಜನೆಯಿದೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗಗಳಲ್ಲಿ ಬಹುತೇಕ ಶೂಟಿಂಗ್‌ ಮುಗಿಸಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಶಿವಮೊಗ್ಗ ಸೇರಿದಂತೆ ಮಲೆನಾಡಿನ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next