ನವದೆಹಲಿ: ಖ್ಯಾತ ಯೂಟ್ಯೂಬ್ ತಾರೆಯೊಬ್ಬಳು ಓನ್ಲಿ ಫ್ಯಾನ್ಸ್ ಕಂಟೆಂಟ್ ಕ್ರಿಯೇಟರ್ ಆಗಲು ಪಿಎಚ್ ಡಿ ಕಲಿಕೆಯನ್ನು ತೊರೆದಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯೂಟ್ಯೂಬರ್ ಆಗಿ ಗುರುತಿಸಿಕೊಂಡಿರುವ ಝಾರ ದಾರ್ (YouTuber Zara Dar) ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಪಿಎಚ್ ಡಿಯನ್ನು ಮಾಡುತ್ತಿದ್ದರು. ಇದೀಗ ತಾನು ಪಿಎಚ್ ಡಿ ಕಲಿಕೆಯನ್ನು ನಿಲ್ಲಿಸಿ ʼಓನ್ಲಿ ಫ್ಯಾನ್ಸ್ ಅಡಲ್ಟ್ ಕಂಟೆಂಟ್ ಕ್ರಿಯೇಟರ್ʼ ಕ್ಷೇತ್ರದತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ʼಪಿಎಚ್‌ಡಿ ಡ್ರಾಪ್‌ಔಟ್, ಓನ್ಲಿ ಫ್ಯಾನ್ಸ್ ಮಾಡೆಲ್ʼ ಎನ್ನುವ ವಿಡಿಯೋದಲ್ಲಿ ತಾನು ಯಾಕೆ ಪಿಎಚ್ ಡಿಯನ್ನು ಡ್ರಾಪ್ ಮಾಡಿ ನೀಲಿ ಚಿತ್ರ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇನೆ ಎನ್ನುವುದರ ಬಗ್ಗೆ ಹೇಳಿದ್ದಾರೆ.
“ನಾನು ನನ್ನ ಪಿಎಚ್‌ಡಿ ಕಲಿಕೆಯನ್ನು ಡ್ರಾಪ್ ಮಾಡುತ್ತಿದ್ದೇನೆ. ನಾನು ಈ ನಿರ್ಧಾರಕ್ಕೆ ಬರಲು ತುಂಬಾ ಯೋಚನೆ ಮಾಡಿದ್ದೇನೆ. ನಾನು ಬೇಸರದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ. ಇದೊಂದು ಒತ್ತಡದ ನಿರ್ಧಾರವಾಗಿದೆ” ಎಂದು ಹೇಳಿದ್ದಾರೆ.
“ಓನ್ಲಿ ಫ್ಯಾನ್ಸ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿ ಮುಂದುವರೆಯುವುದು ಕೇವಲ ವೃತ್ತಿಯ ಆಯ್ಕೆಯಲ್ಲ. ಇದು ನನ್ನ ಇಡೀ ಜೀವನದ ದಿಕ್ಕನ್ನು ಬದಲಾಯಿಸುವ ನಿರ್ಧಾರ. ನಾನು ಲಿಂಕ್ಡ್ಇನ್ ಓಪನ್ ಮಾಡಿದಾಗ ನನ್ನ ವಯಸ್ಸಿನ ಜನ ಈ ವೃತ್ತಿಯಲ್ಲಿ (ಓನ್ಲಿ ಫ್ಯಾನ್ಸ್) ಈಗಾಗಲೇ ಮೂರು ವರ್ಷಕ್ಕೂ ಮೇಲೆ ಅನುಭವ ಪಡೆದು ಉನ್ನತಮಟ್ಟಕ್ಕೇರಿದ್ದಾರೆ. ಆಗ ನನಗೆ ನಾನ್ಯಾಕೆ ಅವರ ಜಾಗದಲ್ಲಿರಬಾರದು ಎಂದು ಅನ್ನಿಸಿತು” ಎಂದಿದ್ದಾರೆ.
ನಾನು ಈಗಾಗಲೇ ಪದವಿ ಶಾಲೆಯಲ್ಲಿ ಒಂದೆರಡು ವರ್ಷಗಳನ್ನು ಕಳೆದಿದ್ದೇನೆ. ಶಿಕ್ಷಣದಲ್ಲಿ ಭವಿಷ್ಯವನ್ನು ಊಹಿಸಬಹುದು. ಪಾಲಿಶ್ ಮಾಡಿದ ಸೂಟ್ ಧರಿಸಿ ತಂಡದೊಂದಿಗೆ ಕೆಲಸ ಮಾಡುವುದು ಅಥವಾ ಪ್ರೊಫೆಸರ್ ಆಗುವುದು ಮತ್ತು ವಿದ್ಯಾರ್ಥಿಗಳು ತನ್ನ ಅಡಿಯಲ್ಲಿ ಕೆಲಸ ಮಾಡುವ ಬಗ್ಗೆ ಊಹಿಸುತ್ತಿದ್ದೆ. ಅದರೆ ಈ ವೃತ್ತಿಯಲ್ಲಿ ತಮಗೆ ಬೇಕದಂತೆ ಉದ್ಯೋಗಿಗಳು ಇರಲು ಆಗುವುದಿಲ್ಲ. ಒಂದು ಕಂಪೆನಿಯಲ್ಲಿ ಕೆಲಸ ಮಾಡಿದರೆ ಅಲ್ಲಿ ಆ ಕಂಪೆನಿಯ ಉದ್ದೇಶದೊಂದಿಗೆ ನಾವು ಕೆಲಸ ಮಾಡಬೇಕಾಗುತ್ತದೆ. ಆದರೆ ಅಲ್ಲಿ ನಮಗೆ ಸಿಗಬೇಕಾದ ಮಾನ್ಯತೆ ಸಿಗುವುದಿಲ್ಲ. ಹೀಗಾಗಿ ನಾನು ನನ್ನ ದುಡಿಮೆಯ ದಾರಿಯನ್ನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾರೆ.
ತನ್ನ ಪಿಎಚ್‌ಡಿಯನ್ನು ಮುಂದುವರಿಸುವಾಗ ಸೈಡ್ ಪ್ರಾಜೆಕ್ಟ್‌ನಂತೆ ಓನ್ಲಿ ಫ್ಯಾನ್ಸ್‌ನಲ್ಲಿ ಕಂಟೆಂಟ್‌ಗಳನ್ನು ಹಾಕುತ್ತಿದ್ದೆ. ಈ ಹಂತದಲ್ಲಿ ನಾನು $1 ಮಿಲಿಯನ್ ಸಂಪಾದಿಸಿದ್ದೇನೆ. ಇದರಿಂದ ನಾನು ಕುಟುಂಬದ ಸಾಲ ಪಾವತಿಸಿದ್ದೇನೆ ಹಾಗೂ ನನಗಾಗಿ ಕಾರು ಖರೀದಿಸಿದ್ದೇನೆ. ನಾನು ಯಾವುದೇ ಸ್ಟೊಡೆಂಟ್ಸ್ ಲಾನ್ ತೆಗೆದುಕೊಳ್ಳಿಲ್ಲ. ಸದ್ಯ ನಾನು ನನ್ನಲ್ಲಿರುವ ಹಣದಿಂದ ಸ್ವಂತ ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಯೂಟ್ಯೂಬ್‌ನಲ್ಲಿ1 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ ಝಾರ ಯಂತ್ರ ಕಲಿಕೆ ನ್ಯೂರಿಯಲ್ ನೆಟ್ ವರ್ಕ್ಸ್ ಸಂಬಂಧಿತ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.