Advertisement
ಈ ನಡುವೆ ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಹೊಸದೊಂದು ಮೆಸೆಂಜಿಂಗ್ ಪ್ಲ್ಯಾಟ್ ಫಾರ್ಮ್ ನ್ನು ತಂದಿದೆ. ವಾಟ್ಸ್ಯಾಪ್ ಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಈ ಆ್ಯಪ್ ನ್ನು ಭಾರತ ಸರ್ಕಾರ ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
Related Articles
Advertisement
ಬಹಳ ವಿಶೇಷವೆಂದರೇ, ಈ ಆ್ಯಪ್ ನಲ್ಲಿ ಈಮೇಲ್ ಅಡ್ರೆಸ್ ಮೂಲಕವೂ ಕೂಡ ನಾವು ನಮ್ಮ ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಕೆಲವರು ತಮ್ಮ ವೈಯಕ್ತಿಕ ಫೋನ್ ನಂಬರ್ ಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂತವರಿಗೆ ಈ ಆಯ್ಕೆ ಸೂಕ್ತವಾಗಿದೆ.
ಸಂದೇಶ್ ವಾಟ್ಸ್ಯಾಪ್ ನಲ್ಲಿ ಇರುವ ಎಲ್ಲಾ ಆಪ್ಶನ್ ಗಳನ್ನು ಹೊಂದಿದೆ. ಬ್ರಾಡ್ ಕಾಸ್ಟ್ ಮೆಸೇಜ್, ಗ್ರೂಪ್ಸ್, ಇಮೇಜ್ ಶೇರಿಂಗ್, ವೀಡಿಯೋ, ಇಮೋಜಿ ಇತ್ಯಾದಿ. ಇನ್ನು, ಸಂದೇಶ್, ವಿಶೇಷವಾದ ಸುರಕ್ಷತಾ ವೈಶಿಷ್ಟ್ಯವನ್ನು ಒದಗಿಸುತ್ತದೆ, ಬಳಕೆದಾರರುನಿರ್ದಿಷ್ಟ ಸಂದೇಶವನ್ನು ಗೌಪ್ಯವೆಂದು ಗುರುತಿಸಿಕೊಳ್ಳಬಹುದಾಗಿದೆ. ಕಳೆದ ಹಲವಾರು ವರ್ಷಗಳಿಂದ, ವಾಟ್ಸಾಪ್ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಚಾಟ್ ಬಾಟ್ ಒತ್ತಾಯಿಸುತ್ತಿದ್ದಾರೆ. ಸಂದೇಶ್, ಈ ಸಮಸ್ಯೆ ಬಗೆಹರಿಸಲು ಆಯ್ಕೆಯನ್ನು ನೀಡುತ್ತಿದೆ.
ನೀವು ಸಂದೇಶ್ ನಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ಅದನ್ನು ಪರಿಹರಿಸಲು ಈಗಾಗಲೇ ಚಾಟ್‌ಬಾಟ್ ಆಯ್ಕೆಯನ್ನು ನೀಡಲಾಗಿದೆ. ಅಪ್ಲಿಕೇಶನ್ ನ ಉತ್ತಮ ವೈಶಿಷ್ಟ್ಯವೆಂದರೆ ಅದು ಲಾಗ್ ಔಟ್ ವೈಶಿಷ್ಟ್ಯವನ್ನು ಹೊಂದಿದ್ದು, ಬಳಕೆದಾರರು ಈ ಅಪ್ಲಿಕೇಶನ್ ನಿಂದ ವಿರಾಮ ತೆಗೆದುಕೊಳ್ಳಬಹುದು. ಇಂತಹ ಒಂದು ವೈಶಿಷ್ಟ್ಯವನ್ನು ತರಲು ವಾಟ್ಸಾಪ್ ಸಹ ತಯಾರಿ ನಡೆಸುತ್ತಿದೆ. ಆದರೆ ವಾಟ್ಸ್ಯಾಪ್ ಲಾಗ್ ಔಟ್ ಆಪ್ಶನ್ ನನ್ನು ಇನ್ನೂ ಪ್ರಾರಂಭಿಸಿಲ್ಲ.
ಓದಿ : ಪೊಗರು ಚಿತ್ರದ ವಿರುದ್ಧ ‘ಡಾಲಿ’ ಅಭಿಮಾನಿಗಳ ಅಸಮಾಧಾನ…ಯಾಕೆ ಗೊತ್ತಾ ?