Advertisement

“ನಾನು ದೊಡ್ಡ ತಪ್ಪು ಮಾಡಿದೆ.. ಆಪ್‌ ಸೇರಿದ ಕೆಲವೇ ಗಂಟೆಗಳಲ್ಲಿ ʼಘರ್‌ ವಾಪಸ್ಸಿʼ ಆದ ಕಾಂಗ್ರೆಸ್ ಸದಸ್ಯರು

11:58 AM Dec 10, 2022 | Team Udayavani |

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಪಡೆದು ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ 250 ಕ್ಷೇತ್ರಗಳಲ್ಲಿ ಕೇವಲ 9 ಸೀಟುಗಳನ್ನು ಮಾತ್ರ ಗೆದ್ದಿದೆ. ಈ ಒಂಬತ್ತು ಸೀಟುಗಳಲ್ಲಿ ಇಬ್ಬರು ಸದಸ್ಯರು ಶುಕ್ರವಾರ (ಡಿ.9 ರಂದು) ಸಂಜೆ ಆಪ್‌ ಗೆ ಸೇರಿದ್ದರು. ಸೇರಿದ ಒಂದು ದಿನದೊಳಗೆಯೇ (ಶನಿವಾರ) ಕಾಂಗ್ರಸ್‌ ಪಕ್ಷಕ್ಕೆ ಮತ್ತೆ ಮರಳಿದ್ದಾರೆ.

Advertisement

ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ, ಮುಸ್ತಫಾಬಾದ್‌ ಕ್ಷೇತ್ರದಲ್ಲಿ ಗೆದ್ದ ಸಬಿಲಾ ಬೇಗಂ ಬ್ರಿಜ್‌ಪುರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಾಜಿಯಾ ಖಾತೂನ್ ಹಾಗೂ 300 ಮತಗಳಿಂದ ಸೋತಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲೀಂ ಅನ್ಸಾರಿ ಶುಕ್ರವಾರ ಸಂಜೆ ಆಪ್‌ ಪಕ್ಷಕ್ಕೆ ಸೇರಿದ್ದರು.

ಇದಾದ ಬಳಿಕ ಈಶಾನ್ಯ ದೆಹಲಿಯ ಮುಸ್ತಫಾಬಾದ್ ಮತ್ತು ಬ್ರಿಜ್‌ಪುರಿ ಪ್ರದೇಶದಲ್ಲಿ ಆಪ್‌ ಸೇರಿದ ಕಾಂಗ್ರೆಸ್‌ ಸದಸ್ಯರ ನಿರ್ಧಾರದ ವಿರುದ್ದ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಹಿರಿಯ ನಾಯಕ  ಅಜಯ್ ಮಾಕನ್, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಮನು ಜೈನ್ ಅವರು ಮೆಹದಿ ಅವರನ್ನು ಹಾವು ಎಂದು ಕರೆದಿದ್ದರು.

ಇದನ್ನೂ ಓದಿ: ಪರಿವಾರದ ‘ಆ ಪ್ರಭಾವಿ’ ಎರಡು ಬಾರಿ ಸಿಎಂ ಭೇಟಿ ಮಾಡಿದ್ದೇಕೆ?; ಸದ್ದಿಲ್ಲದೆ ನಡೆಯುತ್ತಿದೆ ಹಲವು ಬೆಳವಣಿಗೆಗಳು

ಆಪ್‌ ನ ದುರ್ಗೇಶ್ ಪಾಠಕ್ ಅವರು ಪಕ್ಷಕ್ಕೆ ಬಂದ ಹೊಸ ಸದಸ್ಯರನ್ನು ಸ್ವಾಗತಿಸಿದ್ದರು. ಕ್ರೇಜಿವಾಲ್‌ ಅವರ ಅಭಿವೃದ್ದಿ ಕಾರ್ಯಗಳನ್ನು ನೋಡಿದ ಬಳಿಕ ನಾವು ಆಪ್‌ ಸೇರಲು ನಿರ್ಧರಿಸಿದ್ದೇವೆ ಎಂದು ಮೆಹದಿ ಆಪ್‌ ಸೇರುವ ವೇಳೆ ಹೇಳಿದ್ದರು.

Advertisement

ಆಪ್‌ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳಲ್ಲಿ ಮೆಹದಿ ಹಾಗೂ ಇಬ್ಬರು ಸದಸ್ಯರು ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ್ದಾರೆ. ನಡುರಾತ್ರಿ 1:25 ‌ ಗಂಟೆಗೆ ಟ್ವಿಟರ್‌ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಲಿ ಮೆಹದಿ ಅವರು “ನಾನು ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ನಾನು ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ನನ್ನ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಂದೆ ಕಳೆದ 40 ವರ್ಷಗಳಿಂದ ಕಾಂಗ್ರೆಸ್‌ ನಲ್ಲಿದ್ದಾರೆ. ರಾಹುಲ್‌ ಗಾಂಧಿ ಜಿಂದಾಬಾದ್‌ ಎಂದು ಹೇಳಿ, ಕಾರ್ಯಕರ್ತರ ಬಳಿ ಕೈಮುಗಿದು ಕ್ಷಮೆ ಕೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯ 250 ಸೀಟುಗಳಲ್ಲಿ ಆಮ್‌ ಆದ್ಮಿ ಪಾರ್ಟಿ 134 ಸೀಟುಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 104 ಸೀಟುಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್‌ 9 ಸೀಟುಗಳನ್ನು ಮಾತ್ರ ಗೆದ್ದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next