Advertisement

ಮದ್ದೂರು ಪೇಟೆಬೀದಿಯಲ್ಲಿ ಖರೀದಿ ಭರಾಟೆ ಜೋರು

08:04 PM Apr 02, 2022 | Team Udayavani |

ಮದ್ದೂರು: ಪ್ರಸಕ್ತ ಸಾಲಿನ ಯುಗಾದಿ ಹಬ್ಬವನ್ನು ಜನತೆ ಸಡಗರ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿರುವುದು ಎಲ್ಲೆಡೆ ಕಂಡುಬಂದಿದೆ.ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತಸಾರ್ವಜನಿಕರು ಹಾಗೂ ಗ್ರಾಹಕರು ಅಗತ್ಯವಸ್ತು ಖರೀದಿ ಮಾಡಲು ಮುಗಿಬೀಳುತ್ತಿದ್ದರು.ಹಿಂದೂಗಳಿಗೆ ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸಿ ಪ್ರತಿಯೊಬ್ಬರಿಗೂ ಬೇವು-ಬೆಲ್ಲ ಹಂಚುವ ಸಂಪ್ರದಾಯಕ್ಕೆ ಮುಂದಾಗಿದ್ದಾರೆ.

Advertisement

ಪಟ್ಟಣದ ಪೇಟೆಬೀದಿಯುದ್ದಕ್ಕೂ ಹೂಹಾಗೂ ಇನ್ನಿತರೆ ವಸ್ತು ಖರೀದಿಸುವ ಜನಜಂಗುಳಿ ಕಂಡು ಬಂದಿದ್ದು ತಾಲೂಕಿನಕೆಸ್ತೂರು, ಕೊಪ್ಪ, ಬೆಸಗರಹಳ್ಳಿ ಸೇರಿ ಇನ್ನಿತರೆಹೋಬಳಿ ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟುಜೋರಾಗಿ ನಡೆಯಿತು.

ಯುಗಾದಿಸಂಭ್ರಮವನ್ನು ಆಚರಿಸಲು ಮಹಿಳೆಯರು,ಮಕ್ಕಳು ಬಟ್ಟೆ ಖರೀದಿಯಲ್ಲಿ ತೊಡಗಿದ್ದರು.ತಾಲೂಕಿನ ಇತಿಹಾಸ ಪ್ರಸಿದ್ಧ ವೈದ್ಯನಾಥೇಶ್ವರ ದೇವಾಲಯ, ಕದಲೀಪುರಶ್ರೀಕದಲಿಲಕ್ಷಿ$¾àವೆಂಕಟೇಶ್ವರ, ಸೋಮನಹಳ್ಳಿಮಹದೇಶ್ವರ, ತೊಪ್ಪನಹಳ್ಳಿ ಮುತ್ತುರಾಯಸ್ವಾಮಿ ಹಾಗೂ ಪಟ್ಟಣದ ಶ್ರೀಹೊಳೆಆಂಜನೇಯ, ವರದರಾಜಸ್ವಾಮಿ, ಶ್ರೀಉಗ್ರನರಸಿಂಹಸ್ವಾಮಿ, ಮದ್ದೂರಮ್ಮ ಮತ್ತು ವಿಶ್ವೇಶ್ವರ ಸ್ವಾಮಿದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದ್ದು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಯುಗಾದಿ ಹಿನ್ನೆಲೆಯಲ್ಲಿ ದೇವಾಲಯಕ್ಕೆಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿತಮ್ಮ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next