Advertisement

ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು ಮಾದಪ್ಪನ ದೀಪಾವಳಿ ಜಾತ್ರಾ ಮಹೋತ್ಸವದ

02:43 PM Oct 26, 2022 | Team Udayavani |

ಹನೂರು: ಲಕ್ಷಾಂತರ ಭಕ್ತಾದಿಗಳ ಉಘೇ ಮಾದಪ್ಪ, ಉಘೇ ಮಾದಪ್ಪ ಘೋಷಣೆಯೊಂದಿಗೆ ಮಲೆ ಮಾದಪ್ಪನ ದೀಪಾವಳಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಜರುಗಿದೆ.

Advertisement

ಬುಧವಾರ ಬೆಳಿಗ್ಗೆ 9:15 ರಿಂದ 9:45ರ ವರೆಗಿನ ಶುಭ ವೇಳೆಯಲ್ಲಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಹಾ ರಥೋತ್ಸವ ಜರುಗಿದೆ.

ಮಹಾರಥೋತ್ಸವಕ್ಕೆ ಬೇಡಗಂಪಣ ಕುಲದ 108 ಹೆಣ್ಣು ಮಕ್ಕಳು ಬೆಲ್ಲದ ಆರತಿ ಬೆಳಗುವ ಮೂಲಕ ಮೆರುಗು ತಂದರು. ಇದೆ ವೇಳೆ ವೀರಗಾಸೆ ಕುಣಿತ ತಂಡ ಮಂಗಳವಾದ್ಯ ತಂಡ ನಂದಿ ಕಂಬ ಕುಣಿತ ತಂಡ ಮಹಾ ರಥೋತ್ಸವಕ್ಕೆ ಹೆಚ್ಚಿನ ರಂಗು ತಂದರು.

ರಥೋತ್ಸವವು ಪ್ರಾರಂಭವಾಗುತ್ತಿದ್ದಂತೆ ಶ್ರೀ ಕ್ಷೇತ್ರದಾತ್ಯಂತ ಉಘೇ ಮಾದಪ್ಪ ಉಘೇ ಮಾದಪ್ಪ ಘೋಷಣೆಗಳು ಮೊಳಗಿದವು. ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಹರಕೆ ಹೊತ್ತ ಭಕ್ತಾದಿಗಳು ಹೂವು ಹಣ್ಣು ಜವನ ದವಸ ಧಾನ್ಯ ಚಿಲ್ಲರೆ ನಾಣ್ಯಗಳನ್ನು ಸಮರ್ಪಿಸಿ ಧನ್ಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next