ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಮಾದಾಪಟ್ಟಣದ ವಿರಕ್ತ ಮಠದ ಹಿರಿಯ ಶ್ರೀಗಳಾದ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮೀಜಿ (80) ಅವರು ಸೋಮವಾರ ರಾತ್ರಿ 10.45 ರಲ್ಲಿ ಲಿಂಗೈಕ್ಯರಾದರು.
ಸ್ವಾಮೀಜಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಶ್ರೀಗಳ ಅಂತಿಮ ಸಂಸ್ಕಾರವು ಮಠದ ಆವರಣದಲ್ಲಿರುವ ಗದ್ದಿಗೆಯಲ್ಲಿ ಮಂಗಳವಾರ ಸಾಯಂಕಾಲ 4 ಗಂಟೆಗೆ ನಡೆಯಲಿದ್ದು, ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. ಪೂಜ್ಯರು ಐವತ್ತು ವರ್ಷಗಳ ಕಾಲ ಶ್ರೀ ಮಠವನ್ನು ಮುನ್ನಡೆಸುವ ಮೂಲಕ ಭಕ್ತಾದಿಗಳ ಹೃನ್ಮನಗಳಲ್ಲಿ ನೆಲೆಸಿದ್ದರು. ಶ್ರೀ ಗಳು ಉತ್ತಮವಾದ ಸಂಗೀತಗಾರರಾಗಿದ್ದೂ, ಪಿಟೀಲು ವಾದನ ಮಾಡುವ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ: ನ್ಯೂ ಬ್ಯಾಲೆನ್ಸ್ ಒಳಾಂಗಣ ಗ್ರ್ಯಾನ್ ಪ್ರಿ: ಚಿನ್ನ ಗೆದ್ದ ತೇಜಸ್ವಿನ್ ಶಂಕರ್