ಬೆಳ್ತಂಗಡಿ: ಬೈಕ್ ಹಾಗೂ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಲಾರಿ ಅಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಮಂಜ ಸಮೀಪದ ಬಂಗೇರಕಟ್ಟೆ ಸಮೀಪ ನ.25ರಂದು ನಡೆದಿದೆ.
ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕೊಡ್ಲಕ್ಕಿ ನಿವಾಸಿ ಹರೀಶ್ಚಂದ್ರ ಎಂಬವರ ಪುತ್ರ ಹರ್ಷಿತ್ (20) ಸಂಜೆ ಕಾಲೇಜು ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಬಳ್ಳಮಂಜ ರಸ್ತೆಯ ಬಂಗೇರಕಟ್ಟೆ ಎಂಬಲ್ಲಿ ಆಟೋ ರಿಕ್ಷಾಕ್ಕೆ ಢಿಕ್ಕಿಯಾಗಿದ್ದು ಈ ವೇಳೆ ಲಾರಿ ಅಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ.
ತಕ್ಷಣ ಅವರನ್ನು ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಪಘಾತ ಪ್ರಕರಣ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಹರ್ಷಿತ್ ಅತ್ಯುತ್ತಮ್ ಎನ್.ಸಿ.ಸಿ. ಕೆಡೆಟ್ ಆಗಿದ್ದು, ಬೆಂಗಳೂರಿನಲ್ಲಿ ನಡೆದ ಪ್ರಿ ಆರ್.ಡಿ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಗಾಗಿ ನಡೆಯುವ ಸೆಲೆಕ್ಷನ್ ಕ್ಯಾಂಪ್‌ನಲ್ಲಿ ಇದೇ ತಿಂಗಳು ಭಾಗವಹಿಸಿದ್ದ.
ಈತ ತಂದೆ, ತಾಯಿ, ತಮ್ಮ ನನ್ನು ಅಗಲಿದ್ದಾರೆ.
Related Articles
ಎರಡು ದಿನದಲ್ಲಿ ಒಂದೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಅಪಘಾತವಾಗಿ ಸಾವನ್ನಪ್ಪಿರುವ ವಿಚಾರ ಎಲ್ಲರನ್ನೂ ಚಿಂತೆಗೊಳಪಡಿಸಿದೆ. ಮಕ್ಕಳಿಗೆ ವಾಹನ ನೀಡುವಾಗ ಪೋಷಕರು ಎಚ್ಚರ ವಹಿಸಬೇಕು ಎಂಬುವುದೇ ಎಲ್ಲರ ಆಗ್ರಹವಾಗಿದೆ.