Advertisement

ಬಿಷಪ್‌ಗೆ ಮೇಡಂ ಗ್ರೇಸ್‌ ಪಿಂಟೋ ಅಭಿನಂದನೆ

03:48 PM Oct 04, 2018 | Team Udayavani |

ಮುಂಬಯಿ: ಮಂಗಳೂರು ರೋಮನ್‌ ಕೆಥೋಲಿಕ್‌ ಧರ್ಮಪ್ರಾಂತ್ಯದ 14ನೇ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡು ಇತ್ತೀಚೆಗೆ ದೀಕ್ಷೆ ಸ್ವೀಕರಿಸಿರುವ ಬಿಷಪ್‌ ಅ| ವಂ| ಡಾ| ಪೀಟರ್‌ ಪಾವ್ಲ್‌ ಸಲ್ಡಾನ್ಹಾ ಅವರನ್ನು ರಾಯನ್‌ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೋ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.

Advertisement

ಇತ್ತೀಚೆಗೆ ಖಾಸಗಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ರೋಮ್‌ಗೆ ತೆರಳುವ ಮುನ್ನ ನಗರದ ಮಾಹಿಮ್‌ ಪಶ್ಚಿಮದಲ್ಲಿನ ಸೈಂಟ್‌ ಕ್ಸೇವಿಯರ್ ಎಂಜಿನಿಯರಿಂಗ್‌ ಕಾಲೇಜು ಸಮಾಲೋಚನ ಸಭಾಗೃಹದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಾಲ್ಗೊಂಡ  ಬಿಷಪ್‌ ಪೀಟರ್‌ ಪಾವ್ಲ್‌ ಸಲ್ಡಾನ್ಹಾ ಅವರೊಂದಿಗೆ ಕುಶಲೋಪರಿ ವಿಚಾರಿಸಿದ  ಮೇಡಂ ಪಿಂಟೋ ಧರ್ಮಾಧ್ಯಕ್ಷರ ಆಯ್ಕೆ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮೋಡೆಲ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ w.ಡಿ’ಸೋಜಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಮಾಜಿ ಉಪ ಕಾರ್ಯಾ ಧ್ಯಕ್ಷ ಮತ್ತು ನಿರ್ದೇಶಕ ವಿನ್ಸೆಂಟ್‌ ಮಥಾಯಸ್‌, ಸ್ಥಾಪಕಾ ಧ್ಯಕ್ಷ  ಜೋನ್‌ ಡಿ’ಸಿಲ್ವಾ, ಬೃಹನ್ಮುಂ ಬಯಿಯ  ಮಾಜಿ ಪೊಲೀಸ್‌ ಆಯುಕ್ತ ರೊನಾಲ್ಡ್‌ ಎಚ್‌. ಮೆಂಡೋನ್ಸಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next