Advertisement

ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ವರಿಷ್ಠರಿಗೆ ಮಾಹಿತಿ: ಬಿಎಸ್‌ವೈ

12:45 AM Mar 07, 2023 | Team Udayavani |

ಕಲಬುರಗಿ: ಭ್ರಷ್ಟಾಚಾರ ಆರೋಪ ಹೊತ್ತಿರುವ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಮಾಹಿತಿ ಕಳುಹಿಸಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಜೇವರ್ಗಿಯಲ್ಲಿ ಮಾತನಾಡಿದ ಅವರು, ವಿರೂಪಾಕ್ಷಪ್ಪ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಹೀಗಾಗಿ ಅವರ ಬಂಧನವಾಗಲೇಬೇಕು. ಅದಕ್ಕೂ ಮುಂಚಿತವಾಗಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಶಿಫಾ ರಸು ಕಳುಹಿಸಲಾಗಿದೆ ಎಂದರು.

ಮೋದಿಯಂಥ ಬಲಿಷ್ಠ ನಾಯಕರು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ಅಸ್ತಿತ್ವದ ಸಲುವಾಗಿ ಕಾಂಗ್ರೆಸ್‌ ಮುಖಂಡರು ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದಾರೆ ಎಂದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರುವ ಬಗ್ಗೆ ಇನ್ನೂ ನಿಲುವು ಸ್ಪಷ್ಟಪಡಿಸಿಲ್ಲ. ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಜನ ನಿರೀಕ್ಷೆ ಮೀರಿ ಸೇರುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರುವುದು ಖಚಿತ. ಚುನಾವಣೆ ಪ್ರಚಾರ ಕಾರ್ಯತಂತ್ರವನ್ನು ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದರು.

ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರದ ಕೂಪ’
ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷವೇ ಭ್ರಷ್ಟಾಚಾರದ ಕೂಪ. ಅವರು ಮಾಡಿರುವ ಕರ್ಮಕಾಂಡ ಒಂದಾ, ಎರಡಾ? ಕಾಂಗ್ರೆಸ್‌ ಪಕ್ಷವೇ ಬರಿದಾಗುತ್ತಿದೆ. ಇಂತಹ ಬಂದ್‌, ಪ್ರತಿಭಟನೆ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸಬೇಕು ಎಂದುಕೊಂಡಿದ್ದಾರೆ. ಆದರೆ ಜನರು ಬಹಳ ಬುದ್ಧಿವಂತರಿದ್ದು, ಎಲ್ಲವನ್ನೂ ಗಮ ನಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಬಂದ್‌ ಕರೆ ಕೊಟ್ಟಿದ್ದಾರೆ. ಆರೋಪ ಮಾಡು ವವರು ಮೊದಲು ಶುದ್ಧಹಸ್ತರಾಗಿರಬೇಕು. ಆಗಲೇ ಅವರ ಮಾತಿಗೆ ಬೆಲೆ ಇರುವುದು. ಕಾಂಗ್ರೆಸ್ಸಿಗರು ಹಾಸಿಗೆ, ದಿಂಬು, ಬಿಸ್ಕೆಟ್‌, ಕಾಫಿಯಿಂದ ಹಿಡಿದು ನೀರಾವರಿ ಯೋಜನೆಗಳನ್ನೂ ಬಿಟ್ಟಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾ ಮಯ್ಯ ಎಲ್ಲ ಸಚಿವರಿಗೂ ಟಾರ್ಗೆಟ್‌ ನೀಡಿದ್ದರು. ಎಂ.ಬಿ.ಪಾಟೀಲ್‌, ಜಾರ್ಜ್‌, ಮಹಾದೇವಪ್ಪ ಅಂಥವರನ್ನು ಕೇಳಿದರೆ ನಿಜ ಗೊತ್ತಾಗುತ್ತದೆ ಎಂದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಹಿರಿಯ ಅಧಿ ಕಾರಿಗಳು ಚರ್ಚೆ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಅವರ ಬೇಡಿಕೆ ಈಡೇರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next