Advertisement

ಮಡಹಳ್ಳಿ ಗುಡ್ಡ ಕುಸಿತ: ಎಡರನೇ ದಿನದ ಕಾರ್ಯಾಚರಣೆ; ಮತ್ತೊಬ್ಬನ ಶವ ಹೊರಕ್ಕೆ

04:51 PM Mar 06, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಮಡಹಳ್ಳಿ ಗುಡ್ಡ ಕುಸಿತದ ಪ್ರಕರಣದಲ್ಲಿ ಕಲಿನಡಿ ಸಿಲುಕಿದ್ದ ಉತ್ತರ ಪ್ರದೇಶದ ಹಿಟಾಚಿ ಚಾಲಕ ಮಿರಾಜುದ್ದೀನ್(22) ಎಂಬಾತನ ಮೃತ ದೇಹವನ್ನು ಎರಡನೇ ದಿನ ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಹೊರ ತೆಗೆಯಲಾಗಿದೆ.

Advertisement

ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಸ್ ಹಾಗೂ ಅಗ್ನಿ ಶಾಮಕದಳದ 100 ಮಂದಿಯ ತಂಡ ಮಿರಾಜುದ್ದೀನ್ ಕಲ್ಲಿನಡಿ ಸಿಲುಕಿರುವುದು ಮಾಹಿತಿ ಖಚಿತವಾದ ನಂತರ ಕಾರ್ಯಾಚರಣೆ ನಡೆಸಿ ಬಂಡೆಯನ್ನು ಸಿಡಿಮದ್ದು ಹಾಕಿ ಬ್ಲಾಸ್ಟ್ ಮೂಲಕ ಸಿಡಿಸಲಾಯಿತು. ನಂತರ ಕಲ್ಲುಗಳನ್ನು ಅಕ್ಕಪಕ್ಕ ಸರಿಸಿ ಮೃತ ದೇಹವನ್ನು ಹೊರತೆ ತೆಗೆದಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಘಟನೆಯಲ್ಲಿ ಮೂರು ಮಂದಿ ಕಲ್ಲಿನಡಿ ಸಿಲುಕಿದ್ದು, ಅದರಲ್ಲಿ ಮೊದಲ ದಿನ ಶನಿವಾರ ಕಾರ್ಯಾಚರಣೆ ನಡೆಸಿ ಅಜಿಮ್ ಉಲ್ಲಾ ಎಂಬಾತನ ಶವ ಹೊರತೆಗೆಯಲಾಗಿದೆ. ಭಾನುವಾರದ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಮಿರಾಜುದ್ದೀನ್ ಮೃತ ದೇಹ ಹೊರಕ್ಕೆ ತೆಗೆದಿದ್ದಾರೆ. ಇನ್ನು ಸರ್ಫಾಜ್ ಎಂಬ ಕೂಲಿ ಕಾರ್ಮಿಕನ ಮೃತ ದೇಹದ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next