ಶಿರ್ವ: ಬಂಟಕಲ್ಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಹುಚ್ಚು ನಾಯಿಯ ಹಾವಳಿ ವಿಪರೀತವಾಗಿದ್ದು, ಬಂಟಕಲ್ಲು ದೇವಸ್ಥಾನದ ಬಳಿ ಇಬ್ಬರು ನಾಗರಿಕರಿಗೆ ಕಚ್ಚಿ ಗಾಯಗೊಳಿಸಿದೆ.
ನಾಗರಿಕರು ತಮ್ಮ ಮನೆಯ ಸಾಕು ನಾಯಿಗಳನ್ನು ಕಟ್ಟಿ ಹಾಕಿ ಹುಚ್ಚು ನಾಯಿಗಳ ಬಗ್ಗೆ ಎಚ್ಚರದಿಂದಿರುವಂತೆ ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್ ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಕಪ್ಪು ಬಿಳಿ ಬಣ್ಣದ ಕುತ್ತಿಗೆಯಲ್ಲಿ ಬೆಲ್ಟ್ ಇರುವ ಹುಚ್ಚು ನಾಯಿಯೊಂದು ಅರಸೀಕಟ್ಟೆ ಮುಖ್ಯ ರಸ್ತೆಯಿಂದ ರಸ್ತೆ ಬದಿಯಿರುವ ಸುಮಾರು 25ನಾಯಿಗಳಿಗೆ ಕಚ್ಚಿಕೊಂಡು ಗಾಯಗೊಳಿಸುತ್ತಾ ಶಿರ್ವ ಮಂಚಕಲ್‌ನತ್ತ ಸಾಗಿದೆ.ಇನ್ನು 10-15 ದಿನಗಳಲ್ಲಿ ಆ ನಾಯಿಗಳಿಗೂ ರೇಬಿಸ್‌ಕಾಯಿಲೆ ತಗಲುವ ಸಂಭವವಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುವಾಗ ಜಾಗರೂಕರಾಗಿರಬೇಕೆಂದು ಕೆ.ಆರ್.ಪಾಟ್ಕರ್ ವಿನಂತಿಸಿದ್ದಾರೆ.
ಕೆಲ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪಶುವೈದ್ಯಡಾ| ಅರುಣ್ ಹೆಗ್ಡೆ ನೆೇತೃತ್ವದಲ್ಲಿ ಬಂಟಕಲ್ಲು ಮತ್ತು ಹೇರೂರು ಪರಿಸರದಲ್ಲಿ ನಾಯಿಗಳಿಗೆ ರೇಬಿಸ್ ಲಸಿಕೆ ಕೊಡಿಸಲಾಗಿದೆ. ಆದರೂ ಹುಚ್ಚುನಾಯಿ ಹಾವಳಿ ವಿಪರೀತವಾಗಿದೆ.
ಹುಚ್ಚು ನಾಯಿ ಕಡಿತದ ಹಾವಳಿ ಸಂದರ್ಭದಲ್ಲಿ ನಾಗರಿಕರು ಏನು ಮಾಡಬೇಕು,ಅದಕ್ಕೆ ಪರಿಹಾರವೇನು.? ಬೀದಿ ನಾಯಿಗಳ ನಿಯಂತ್ರಣ ಹೇಗೆ.?ಇದು ಯಾವ ಇಲಾಖೆಗೆ ಸಂಬಂಧಪಟ್ಟಿದೆ? .. ಬೀದಿ ನಾಯಿಗಳನ್ನು ಕೊಂದರೆ ಪ್ರಾಣಿ ದಯಾ ಸಂಘದವರು ವಿರೋಧಿಸುತ್ತಾರೆ. ಹುಚ್ಚು ನಾಯಿಯ ಹಾವಳಿ ಬಂದಾಗ ಜನರು ಯಾವ ಇಲಾಖೆಯನ್ನು ಸಂಪರ್ಕಿಸಬೇಕು?..
ಸ್ಥಳಿಯಾಡಳಿತವೇ,ಪೊಲೀಸ್ ಇಲಾಖೆಯೇ, ಪಶು ಸಂಗೋಪನಾ ಇಲಾಖೆಯೇ ಅಥವಾ ಆರೋಗ್ಯ ಇಲಾಖೆಯೇ ಎಂಬುದು ನಾಗರಿಕರ ಗೊಂದಲದ ಪ್ರಶ್ನೆಯಾಗಿದೆ.
ಜನರು ಜಾಗ್ರತೆ ವಹಿಸಿ
ಹುಚ್ಚು ನಾಯಿ ಹಾವಳಿ ನಿಯಂತ್ರಣಕ್ಕಾಗಿ ಹೇರೂರು ಮತ್ತು ಬಂಟಕಲ್ಲು ಅಂಗನವಾಡಿ ಸಮೀಪ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲು ಕ್ಯಾಂಪ್ ನಡೆಸಲಾಗಿದೆ. ರೇನಿಸ್ ನಿಯಂತ್ರಣಕ್ಕಾಗಿ ತಮ್ಮ ಸಾಕು ನಾಯಿಗಳನ್ನು ಕಟ್ಟಿಹಾಕಿ ಜಾಗ್ರತೆ ವಹಿಸಿ ಸಹಕರಿಸಬೇಕಾಗಿದೆ.
– ಡಾ| ಅರುಣ್ ಕುಮಾರ್‌ಹೆಗ್ಡೆ, ಪಶುವೈದ್ಯಾಧಿಕಾರಿ, ಶಿರ್ವ.
ಇದನ್ನೂ ಓದಿ: Fraud Case: ಬ್ಯಾಂಕಿಗೆ 538 ಕೋಟಿ ವಂಚನೆ… ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ