Advertisement

ಏಳು ತಿಂಗಳ ಬಳಿಕ ಕೇವಲ ಓರ್ವ ಪ್ರವಾಸಿಗನಿಗಾಗಿ ಪ್ರಸಿದ್ಧ ಮಾಚು ಪೀಚು ಪ್ರವಾಸಿ ತಾಣ ಓಪನ್!

05:56 PM Oct 13, 2020 | Nagendra Trasi |

ಲೀಮಾ, ಪೆರು:ಪೆರು ದೇಶದ ಜನಪ್ರಿಯ, ಜನಾರ್ಷಕ ಪ್ರವಾಸಿ ತಾಣ ಮಾಚು, ಪೀಚು ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರ. ಆದರೆ ಕೋವಿಡ್ 19 ಸೋಂಕಿನಿಂದಾಗಿ ಏಳು ತಿಂಗಳ ಕಾಲ ಮುಚ್ಚಿದ್ದ ಮಾಚು ಪೀಚು ತಾಣ ತೆರೆಯಲಾಗಿದೆ. ಅದು ಕೇವಲ ಓರ್ವ ಜಪಾನ್ ಪ್ರವಾಸಿಗನ ಭೇಟಿಗಾಗಿ!

Advertisement

ಕೋವಿಡ್ ಸೋಂಕಿನಿಂದ ಬಂದ್ ಆಗಿದ್ದ ಮಾಚು ಪೀಚು ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಸುಮಾರು ಏಳು ತಿಂಗಳಿನಿಂದ ಈ ಜಪಾನ್ ಪ್ರವಾಸಿಗ ಕಾಯುತ್ತಿದ್ದ ಎಂದು ವರದಿ ವಿವರಿಸಿದೆ. ಪೆರುವಿನ ಆಗೌಸ್ ಕ್ಯಾಲಿಯೆಂಟಸ್ ನಗರದಲ್ಲಿ ಏಳು ತಿಂಗಳಿನಿಂದ ಬೀಡುಬಿಟ್ಟಿದ್ದು, ತನಗೆ ಮಾಚು ಪೀಚು ತಾಣ ಪ್ರವೇಶಿಸಲು ಅನುವು ಮಾಡಿಕೊಡಬೇಕೆಂದು ಜಪಾನ್ ಪ್ರವಾಸಿಗ ಜೆಸ್ಸೆ ಟಾಕಾಯಾಮಾ ಅವರ ಮನವಿಯನ್ನು ಅಂಗೀಕರಿಸಲಾಗಿತ್ತು ಎಂದು ಸಂಸ್ಕೃತಿ ಸಚಿವ ಅಲೆಜಾಂಡ್ರೋ ನೆಯ್ರಾ ತಿಳಿಸಿದ್ದಾರೆ.

ಈ ಬಗ್ಗೆ ಜೆಸ್ಸೆ ಮಾಚು ಪೀಚುಗೆ ಭೇಟಿ ನೀಡಿರುವ ಮೊದಲ ಪ್ರವಾಸಿಗ ಎಂಬ ಬಗ್ಗೆ ಇನ್ಸ್ ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಇದೊಂದು ನಿಜಕ್ಕೂ ಅದ್ಭುತ…ಥ್ಯಾಂಕ್ಯು ಎಂದು ಉಲ್ಲೇಖಿಸಿ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಿರುವುದಾಗಿ ವರದಿ ತಿಳಿಸಿದೆ.

ಒಂದು ದಿನದಲ್ಲಿ ಸಾವಿರಾರು ಪ್ರವಾಸಿಗರು ಮಾಚು ಪೀಚುಗೆ ಭೇಟಿ ನೀಡುತ್ತಿದ್ದರು. ಆದರೆ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಈ ಪ್ರಸಿದ್ಧ ಪ್ರವಾಸಿ ತಾಣ ಬಂದ್ ಆಗಿತ್ತು. ಈ 26 ವರ್ಷದ ಜಪಾನ್ ನಿವಾಸಿ ನಾರಾ ಕಳೆದ ಮಾರ್ಚ್ ತಿಂಗಳಿನಿಂದಲೇ ಪೆರುವಿನಲ್ಲಿ ಉಳಿಯುವಂತಾಗಿತ್ತು. ಮಾಚು ಪೀಚು ಭೇಟಿಗಾಗಿ ಪೆರುವಿಗೆ ಬಂದು ಟಿಕೆಟ್ ಖರೀದಿಸಿದ್ದ ದಿನವೇ ದೇಶದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿತ್ತು.

ಹೀಗೆ ಸ್ಥಳೀಯ ಪತ್ರಿಕೆಯಲ್ಲಿ ಈತನ ಕುರಿತು ವರದಿ ಪ್ರಕಟವಾಗಿತ್ತು. ಅಂತೂ ಕೊನೆಗೆ ಸ್ಥಳೀಯ ಪ್ರವಾಸೋದ್ಯಮ ಅಧಿಕಾರಿಗಳು ವಿಶೇಷ ಅನುಮತಿ ನೀಡುವುದಾಗಿ ತಿಳಿಸಿದ್ದರು. ಅದರಂತೆ ನಾರಾ ಮಾಚು ಪೀಚುಗೆ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next