Advertisement

ಮಚ್ಚಟ್ಟು: ಪಿಕಪ್‌ ವಾಹನ ಪಲ್ಟಿ; ಸವಾರರಿಗೆ ಗಾಯ

09:48 PM May 02, 2023 | Team Udayavani |

ಸಿದ್ದಾಪುರ: ಅಮಾಸೆಬೈಲು ಸಿದ್ದಾಪುರ ಮುಖ್ಯ ರಸ್ತೆಯ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ಎಂಬಲ್ಲಿ ಪಿಕಪ್‌ ವಾಹನ ಚಾಲಕನ ನಿರ್ಲಕ್ಷದ ಚಾಲನೆ ಪರಿಣಾಮ ಮಗುಚಿ ಬಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕಾರ್ಮಿಕರು ಗಂಭೀರ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಏರ್‌ಟೆಲ್‌ ಕಂಪೆನಿಯ ಕೇಬಲ್‌ ಅಳವಡಿಸುವ ಕಾರ್ಮಿಕರಾಗಿ ಕೆಲಸ ಮಾಡುವ ಉತ್ತರ ಪ್ರದೇಶ ಮೂಲದ ಗೋಲು ಇವನಟ್ಟಿ ಮತ್ತು ದಿವಾನ್‌ ಶಾ ಅವರು ಕೆಲಸ ಮುಗಿಸಿಕೊಂಡು, ಪಿಕಪ್‌ ವಾಹನದಲ್ಲಿ ಸಿದ್ದಾಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ವಾಹನ ಮಗುಚಿ ಬಿತ್ತು. ಗಾಯಗೊಂಡವರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಓಂ ಪ್ರಕಾಶ್‌ ಕಂಗಾಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next