Advertisement

ಐಪಿಎಲ್‌ ಮುಗಿದ ಬಳಿಕ ಎಂ.ಎಸ್‌.ಧೋನಿ ನಿವೃತಿ?

11:29 AM Jan 18, 2020 | keerthan |

ನವದೆಹಲಿ: ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಕೇಂದ್ರ ಒಪ್ಪಂದ ಪಟ್ಟಿಯಿಂದ ಭಾರತ ಮಾಜಿ ನಾಯಕ ಎಂ.ಎಸ್‌.ಧೋನಿ ಕೈಬಿಡುತ್ತಿದ್ದಂತೆ ಧೋನಿ ಕ್ರಿಕೆಟ್‌ ಭವಿಷ್ಯ ಅಂತ್ಯವಾಯಿತು ಎನ್ನುವಂತಹ ಸುದ್ದಿಗಳು ಹಬ್ಬಿದ್ದವು. ಆದರೆ ಧೋನಿ ಮುಂಬರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟ ಮುಗಿದ ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ ಹೇಳಲಿದ್ದಾರೆ ಎನ್ನಲಾಗಿದೆ.

Advertisement

ಮೂಲಗಳ ವರದಿ ಪ್ರಕಾರ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದು ಅಲ್ಲಿ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ವಿಶ್ವಕಪ್‌ ಟಿ20 ತಂಡದ ಆಯ್ಕೆಗೆ ಲಭ್ಯವಾಗುವ ಸೂಚನೆ ನೀಡಬಹುದು.

ಒಂದು ವೇಳೆ ಧೋನಿ ಅಂದುಕೊಂಡಂತೆ ಲೆಕ್ಕಾಚಾರಗಳು ಐಪಿಎಲ್‌ನಲ್ಲಿ ನಡೆಯದೆ ಹೋದರೆ, ವೈಯಕ್ತಿಕವಾಗಿ ಕಳಪೆ ಪ್ರದರ್ಶನ ಹೊರಹೊಮ್ಮಿದರೆ ಐಪಿಎಲ್‌ನಲ್ಲೇ ವಿದಾಯ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next