Advertisement

ಒಕ್ಕಲಿಗರು ಜೆಡಿಎಸ್‌ ತೊರೆಯುತ್ತಿದ್ದಾರೆ: ಲಕ್ಷ್ಮಣ್‌

12:30 PM Jan 24, 2022 | Team Udayavani |

ಮೈಸೂರು: ಒಕ್ಕಲಿಗ ಸಮುದಾಯಕ್ಕೆ ನಾನೇ ಪ್ರಬಲ ನಾಯಕ ಎಂದುಕೊಂಡಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ, ಈಗ ಆ ಸಮುದಾಯಜೆಡಿಎಸ್‌ನಿಂದ ವಿಮುಖವಾಗುವ ಮೂಲಕ ಶಾಕ್‌ನೀಡುತ್ತಿದೆ. ಅದಕ್ಕಾಗಿ ಅವರು ಮಾನಸಿಕ ಸ್ಥಿಮಿತಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂದು ಎಂ. ಲಕ್ಷ್ಮಣ್‌ ವ್ಯಂಗ್ಯವಾಡಿದರು.

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದರಸಂಬಂಧ ನಗರದ ಕಾಂಗ್ರೆಸ್‌ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಇದೇ ಮೊದಲಿಗೆ ವಿರೋಧ ಪಕ್ಷವೊಂದನ್ನು ಮತ್ತೂಂದು ವಿರೋಧ ಪಕ್ಷ ಟೀಕಿಸುವ, ಆರೋಪ ಮಾಡುತ್ತಿರುವುದು ರಾಜ್ಯದಲ್ಲಿ ನಡೆಯುತ್ತಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಆಡಳಿತಪಕ್ಷದ ಜನ ವಿರೋಧಿ ನೀತಿ ವಿರೋಧಿಸುವ ಬದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಅಸಂಸದೀಯ ಪದ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ತಮ್ಮನ್ನು ಒಕ್ಕಲಿಗರ ಚಾಂಪಿಯನ್‌ ಅಂದುಕೊಂಡಿದ್ದರು. ಆದರೆ ಒಕ್ಕಲಿಗರು ಜೆಡಿಎಸ್‌ ಬಿಟ್ಟು ಹೋಗುತ್ತಿದ್ದಾರೆ. 5 ವರ್ಷಗಳ ಹಿಂದೆ 08 ಮಂದಿ ಒಕ್ಕಲಿಗ ನಾಯಕರು ಕಾಂಗ್ರೆಸ್‌ ಸೇರಿದ್ದರು. ಈಗ 4-5 ಮಂದಿ ಸೇರಿದ್ದರೆ, ಮುಂದಿನ ದಿನಗಳಲ್ಲಿ 15ಮಂದಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಲುಮಾತುಕತೆ ನಡೆಸಿದ್ದಾರೆ. ಇವರಲ್ಲಿ 10 ಜನ ಒಕ್ಕಲಿಗರೇಆಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಎಚ್‌ಡಿಕೆಯವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಕೀಳು ಪದಗಳಲ್ಲಿ ವಿಪಕ್ಷ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆಂದರು. ಮೈಸೂರು ಜಿಲ್ಲಾಡಳಿತ ಮಕ್ಕಳ ಸೋಂಕು ಕುರಿತಂತೆ ಅಂಕಿ ಅಂಶ ಮುಚ್ಚಿಡುತ್ತಿದೆ ಎಂದರು.

ಉಸ್ತುವಾರಿ ಸಚಿವರ ಕೊಡುಗೆ ಶೂನ್ಯ: ಮೈಸೂರು ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗಿ ಬಂದಿರುವ ಎಸ್‌.ಟಿ.ಸೋಮಶೇಖರ್‌ ಅವರು ಕಳೆದ ಒಂದೂವರೆ ವರ್ಷದಿಂದ ಒಂದು ನಯಾ ಪೈಸೆ ಅನುದಾನ ತಂದಿಲ್ಲ.ಕೆಲವರು ಮುಡಾ ಕಚೇರಿಯನ್ನು ರಿಯಲ್‌ ಎಸ್ಟೇಟ್‌ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮುಡಾ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇವೆ ಎಂದರು.

ರಾತ್ರಿ 7 ಗಂಟೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾರಿಗೂ ಸಿಗುತ್ತಿಲ್ಲ. ಅವರು ಹಿರಿಯ ಸಚಿವರೊಬ್ಬರ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದಾರೆ ಎಂದು ಜನರೇ ಮಾತನಾಡುತ್ತಿದ್ದಾರೆ. ಇತ್ತ ಗೃಹ ಸಚಿವರು ಮಾಧ್ಯಮ ಹೇಳಿಕೆಗೆ ಸೀಮಿತವಾಗಿದ್ದಾರೆಂದು ಲೇವಡಿ ಮಾಡಿದರು.

Advertisement

ಫ್ಯಾಮಿಲಿ ಟ್ರಸ್ಟ್ ಎಂಬುದು ಸ್ಪಷ್ಟವಾಗಿದೆ :

ಕುಮಾರಸ್ವಾಮಿ ಅವರು ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಒಕ್ಕಲಿಗರಿಗೆ ಜೆಡಿಎಸ್‌ ಫ್ಯಾಮಿಲಿಟ್ರಸ್ಟ್ ಎಂಬುದು ಸ್ಪಷ್ಟವಾಗಿದೆ. ರಾಮನಗರ,ಚನ್ನಪಟ್ಟಣ ಕ್ಷೇತ್ರದಲ್ಲಿ ನಿಮ್ಮ ಕುಟುಂಬದವರ ಬದಲಿಗೆಒಕ್ಕಲಿಗ ಸಮುದಾಯ ಮುಖಂಡರಿಗೆ ಟಿಕೆಟ್‌ ನೀಡಿಎಂದು ಸವಾಲು ಹಾಕಿದ ಅವರು, ಜೆಡಿಎಸ್‌ನಲ್ಲಿ ನಿಮ್ಮಮುಂದೆ ಮತ್ತೂಬ್ಬ ಒಕ್ಕಲಿಗ ನಾಯಕನನ್ನು ಬೆಳೆಯಲುಬಿಟ್ಟಿಲ್ಲ. ಕಂತ್ರಿ ರಾಜಕಾರಣ ಮಾಡುತ್ತಿರುವವರುಯಾರು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿಶೇ.80 ಮಂದಿ ಒಕ್ಕಲಿಗ ಸಮುದಾಯ ಜೆಡಿಎಸ್‌ನಿಂದ ದೂರವಾಗಿದೆ ಎಂದು ಲಕ್ಷ್ಮಣ್‌ ದೂರಿದರು.

ಬಿಜೆಪಿಗೆ ಕನ್ನಡ ಭಾಷೆ ಮೇಲೆಅಸಡ್ಡೆ. 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನನೀಡಿತ್ತು. ಆದರೆ ಇಲ್ಲಿಯವರೆಗೆ ಸ್ವಂತಕಟ್ಟಡ ಸಿಕ್ಕಿಲ್ಲ. ಸಂಸ್ಕೃತ ಭಾಷೆಗೆ 1200 ಕೋಟಿ, ತೆಲುಗು ಭಾಷೆಗೆ 75ಕೋಟಿ, ತಮಿಳು ಭಾಷೆಗೆ 50ನೀಡಿರುವ ಕೇಂದ್ರ ಸರ್ಕಾರ, ಕನ್ನಡಭಾಷೆಗೆ ಕೇವಲ 08 ಕೋಟಿ ನೀಡುವಮೂಲಕ ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿದೆ. ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next