Advertisement

ವಡ್ಡರ್ಸೆ: ಎಂ.ಜಿ. ಕಾಲನಿ ಪ್ರದೇಶಕ್ಕೆ ತಹಶೀಲ್ದಾರ್‌, ಠಾಣಾಧಿಕಾರಿಗಳ ಭೇಟಿ

11:04 PM May 25, 2020 | Sriram |

ಕೋಟ: ಬ್ರಹ್ಮಾವರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರು ವಾಸವಿದ್ದ ಕೋಟ ಸಮೀಪ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಯಾಳಕ್ಲು ಹಾಗೂ ಎಂಜಿ. ಕಾಲನಿ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ಗೆ ತಹಶೀಲ್ದಾರರು, ಠಾಣಾಧಿಕಾರಿಗಳು ಭೇಟಿ ನೀಡಿದರು.

Advertisement

ಈ ಭಾಗದ ಹಲವು ಮನೆಗಳಿಗೆ ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ ಹಾಗೂ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಸೋಮವಾರ ಬೆಳಗ್ಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಕುರಿತು ತಿಳಿಸಿದರು ಹಾಗೂ ಆರೋಗ್ಯದ ಬಗ್ಗೆ ವಹಿಸುವಂತೆ ಮಾಹಿತಿ ನೀಡಿದರು.

ಸ್ಥಳೀಯ ವಡ್ಡರ್ಸೆ ಗ್ರಾ.ಪಂ. ನೇತೃತ್ವದಲ್ಲಿ ನಿಯೋಜಿತಗೊಂಡ ಪ್ರತಿನಿಧಿಗಳು ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡು ತ್ತಿದ್ದು, ಗ್ರಾ.ಪಂ. ಅಧ್ಯಕ್ಷೆ ಹೇಮಾ, ಪಿ.ಡಿ.ಒ. ಉಮೇಶ್‌, ಗ್ರಾ.ಪಂ. ಸದಸ್ಯ ಕೋಟಿ ಪೂಜಾರಿ ಹಾಗೂ ಇನ್ನಿತರ ಸದಸ್ಯರ ನೇತೃತ್ವದಲ್ಲಿ ಸ್ಥಳೀಯರ ಕುಂದು ಕೊರತೆಗಳನ್ನು ಆಲಿಸಲಾಗುತ್ತಿದೆ. ಆಶಾ, ಆರೋಗ್ಯ ಕಾರ್ಯಕರ್ತೆಯರು ಸ್ಥಳೀಯ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಹಾಲು ಪೂರೈಕೆ ಸ್ಥಗಿತ
ಈ ಭಾಗದ ಸುಮಾರು 35ಕ್ಕೂ ಹೆಚ್ಚು ಮನೆಗಳಿಂದ 150 ಲೀಟರ್‌ ಹಾಲನ್ನು ಸ್ಥಳೀಯ ಮಧುವನ ಹಾಲು ಉತ್ಪಾದಕರ ಸಂಘಕ್ಕೆ ಪೂರೈಕೆ ಮಾಡಲಾಗುತಿತ್ತು. ಇದೀಗ ಲಾಕ್‌ಡೌನ್‌ ಆಗಿರುವುದರಿಂದ ಹಾಲು ಪೂರೈಕೆ ಸ್ಥಗಿತಗೊಂಡಿದ್ದು, ಸ್ಥಳೀಯ ನಿವಾಸಿಗಳಿಗೆ ನೀಡುತ್ತಿದ್ದಾರೆ.

ಬಫ‌ರ್‌ ಝೋನ್‌ ಕಡಿತಕ್ಕೆ ಮನವಿ
ಎಂ.ಜಿ. ಕಾಲನಿ ಯಾಳಕ್ಲು ಪ್ರದೇಶ ದಿಂದ ಹೊರಗಡೆ ಇದೆ. ಆದರೂ ಇದನ್ನು ಬಫ‌ರ್‌ ಝೋನ್‌ ಎಂದು ಘೋಷಿಸಿ ಲಾಕ್‌ ಮಾಡಲಾಗಿದೆ. ಇದರಿಂದಾಗಿ ಕಾಲನಿಯ 150ಕ್ಕೂ ಹೆಚ್ಚು ಮನೆಗಳ ಕೂಲಿ ಕಾರ್ಮಿಕರು, ದೈನಂದಿನ ದುಡಿಮೆಯನ್ನು ನಂಬಿ ಬದುಕುವ ಬಡ ವರ್ಗದವರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಎಂ.ಜಿ. ಕಾಲನಿಯಿಂದ ಯಾಳಕ್ಲು ಸಂಪರ್ಕಿಸುವ ರಸ್ತೆಯನ್ನು ಮಾತ್ರ ಲಾಕ್‌ ಮಾಡಬೇಕು ಎಂ.ಜಿ. ಕಾಲನಿಗೆ ವಿನಾಯಿತಿ ನೀಡಬೇಕು ಎಂದು ಸ್ಥಳೀಯುರು ತಹಶೀಲ್ದಾರರಿಗೆ ಮನವಿ ಮಾಡಿದರು.

Advertisement

ಸೆಲೂನ್‌ಗಳು ಬಂದ್‌
ಸ್ಥಳೀಯ ಪ್ರದೇಶದಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೋಟ ಹೋಬಳಿಯ ಕೋಟ, ಸಾಲಿಗ್ರಾಮ, ಸಾಸ್ತಾನ, ಸಾೖಬ್ರಕಟ್ಟೆ, ಕೊಕ್ಕರ್ಣೆ, ಬ್ರಹ್ಮಾವರ ಸಹಿತ ಹಲವು ಕಡೆಗಳ ಸೆಲೂನ್‌ ಶಾಪ್‌ಗ್ಳು ಸೋಮವಾರದಿಂದ ಕಾರ್ಯ ಸ್ಥಗಿತಗೊಳಿಸಿದ್ದು ಮೇ 31ರ ತನಕ ಅಂಗಡಿಯನ್ನು ತೆರೆಯದಿರಲು ಕೋಟ ವಲಯ ಸವಿತಾ ಸಮಾಜ ಕರೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next