Advertisement

‌ಬೇವಾಫಾ ಚಾಯಿವಾಲಾ: ಕೈಕೊಟ್ಟ ಪ್ರಿಯತಮೆಯ ಹೆಸರಿನಲ್ಲೇ ಚಹಾದಂಗಡಿ ತೆರೆದ ಪ್ರಿಯಕರ.!

05:49 PM Nov 22, 2022 | Team Udayavani |

ಮಧ್ಯ ಪ್ರದೇಶ: ಜೀವನದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಸಿಗಲ್ಲ. ಕೆಲವರಿಗೆ ಪ್ರೀತಿಸಿದವರು ಸಿಗಲ್ಲ. ಇಲ್ಲೊಬ್ಬ ವ್ಯಕ್ತಿ ಪ್ರಿಯತಮೆ ಕೈಕೊಟ್ಟಳೆಂದು ವಿಭಿನ್ನವಾಗಿ ಆಕೆಯನ್ನು ಅಣುಕಿಸಲು ಚಹಾದಂಗಡಿಯೊಂದನ್ನು ತೆರೆದು ಸುದ್ದಿ ಆಗಿದ್ದಾನೆ.

Advertisement

ಮಧ್ಯಪ್ರದೇಶದ ರಾಜಗಢ ಮೂಲದ ಅಂತರ್ ಗುಜ್ಜರ್ ಎಂಬ ಯುವಕ ತನ್ನ ಪ್ರಿಯತಮೆ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿ, ಮೋಸ ಮಾಡಿದಳೆಂದು ಆಕೆಗೆ ಮಾನಸಿಕವಾಗಿ ಕಾಡಲು ಚಹಾದ ಅಂಗಡಿಯೊಂದನ್ನು ಹಾಕಿದ್ದಾನೆ.

ತನ್ನ ಪ್ರೇಯಸಿ ಮೋಸ ಮಾಡಿದಳೆಂದು “ಎಂ ಬೇವಾಫಾ ಚಾಯಿವಾಲಾ” ಎಂಬ ಚಹಾದಂಗಡಿಯನ್ನು ತೆರೆದಿದ್ದಾನೆ. “ಎಂ” ಎಂದರೆ ಅಂತರ್‌ ಅವರ ಪ್ರೇಯಸಿ ಹೆಸರಿನ ಮೊದಲ ಅಕ್ಷರ.

ವಿಶೇಷವೆಂದರೆ ಅಂತರ್‌ ಚಹಾದಂಗಡಿಯಲ್ಲಿ ಚಹಾಕ್ಕೆ ನಾನಾ ವರ್ಗದ ಜನರಿಗೆ ಬೇರೆ ಬೇರೆ ದರವನ್ನು ನಿಗದಿ ಮಾಡಿದ್ದಾನೆ. ಜೋಡಿಗಳು ಬಂದರೆ ಒಂದು ಚಹಾ ಕಪ್‌ ಗೆ 10 ರೂ. ಪ್ರೇಯಿಸಿಯಿಂದ ದ್ರೋಹಕ್ಕೆ ಒಳಗಾದವರು ಬಂದರೆ ಅಂತವರಿಗೆ ಒಂದು ಕಪ್‌ ಚಹಾಕ್ಕೆ 5 ರೂ.ನಂತೆ ಚಹಾವನ್ನು ನೀಡುತ್ತಾರೆ ಅಂತರ್.‌

ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಯಾಗಿರುವ ಅಂತರ್‌ ಈ ಬಗ್ಗೆ ಮಾತಾನಾಡುತ್ತಾ “ 5 ವರ್ಷದ ಹಿಂದೆ ನಾನು ಸಂಬಂಧಿಕರ ಮದುವೆಯಲ್ಲಿ ಒಂದು ಹುಡುಗಿಯನ್ನು ಭೇಟಿಯಾಗಿದ್ದೆ. ಅಲ್ಲಿಂದ ನಾವು ಸ್ನೇಹಿತರಾಗಿ, ಪರಸ್ಪರ ಪ್ರೀತಿಸಲು ಆರಂಭಿಸಿದ್ದೀವಿ. 2 ವರ್ಷದ ಬಳಿಕ ಆ ಹುಡುಗಿ ನನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ, ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಳು. ನನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದಳು. ನಾನು ಅವಳನ್ನೇ ನಂಬಿ ನಿರುದ್ಯೋಗಿಯಾದೆ. ಅವಳ ಗಂಡನ ಬಳಿ ಎಲ್ಲವೂ ಇದೆ” ಎಂದರು.

Advertisement

ಇದಾದ ಬಳಿಕ “ನಾನು ನನಗೆ ಜೀವನವೇ ಬೇಡ ಎಂದಾಗಿತ್ತು. ಆದರೆ ನನ್ನ ಸ್ನೇಹಿತ ನನಗೆ ಸಲಹೆ ನೀಡಿದ. ಎರಡು ವರ್ಷದ ಬಳಿಕ ನಾನು ಅವಳನ್ನು ಅಣಕಿಸುವ ಹಾಗೆ ಅವಳ ಮೊದಲ ಅಕ್ಷರದಿಂದಲೇ ಈ ಚಹಾದಂಗಡಿಯನ್ನು ಆರಂಭಸಿದೆ” ಎಂದಿದ್ದಾರೆ.

ಈ ಹಿಂದೆ ನನ್ನ ಮಾಜಿ ಗೆಳತಿ ಯಾವುದಾದರೂ ಅಂಗಡಿಯನ್ನು ತೆರೆಯುವ ಯೋಜನೆ ಇದ್ದರೆ ಅದಕ್ಕೆ ನನ್ನ ಹೆಸರನ್ನು ಇಡಿ ಎಂದು ಹೇಳಿದ್ದಳು ಎನ್ನುತ್ತಾರೆ ಅಂತರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next