Advertisement

ದೃಶ್ಯ ಮಾಧ್ಯಮಗಳಿಂದಾದ ಅಚಾತುರ್ಯ, ಡಿಕೆಶಿ ಕುರಿತ ನನ್ನ ಹೇಳಿಕೆಗೆ ವಿಷಾದ-ಎಂ.ಬಿ.ಪಾಟೀಲ

09:36 AM Aug 18, 2019 | keerthan |

ವಿಜಯಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಆರ್.ಅಶೋಕ ಕುರಿತು ನೀಡಿದ ಹೇಳಿಕೆಯನ್ನು ನನ್ನ ಕುರಿತಾದ ಹೇಳಿಕೆ ಎಂದು ಎರಡು ದೃಶ್ಯವನ್ನು ಮಾಧ್ಯಮಗಳು ತಪ್ಪು ವರದಿ ಮಾಡಿದ್ದವು. ಅಲ್ಲದೇ ತಾವು ಮಾಡಿದ ತಪ್ಪು ವರದಿಗೆ ನನ್ನಿಂದ ಪ್ರತಿಕ್ರಿಯೆ ಪಡೆದು ಅಚಾತುರ್ಯ ಎಸಗಿದ್ದಾರೆ. ಹೀಗಾಗಿ ಮಾಧ್ಯಮಗಳಿಂದಾದ ಅಚಾತುರ್ಯಕ್ಕೆ ನಾನು ಡಿ.ಕೆ.ಶಿವಕುಮಾರ ಅವರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಮೊಬೈಲ್ ಮೂಲಕ ಕೂಡ ಮಾತನಾಡಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು,ನಾನು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಫೋನ್ ಟ್ಯಾಪ್ ಕುರಿತು ಅಧಿಕಾರಿಗಳು ಸೇರಿ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ ಎಂದರು. ನಾನು ನೈತಿಕತೆ ಮತ್ತು ಇತರರ ಖಾಸಗಿ ತನ ಗೌರವಿಸುವ ವ್ಯಕ್ತಿ. ಹೀಗಾಗಿ ಈ ವಿಷಯದಲ್ಲಿ ಸತ್ಯ ಹೊರಬರಲು ರಾಜ್ಯದ ಪೊಲೀಸ್ ಅಧಿಕಾರಿಗಳಿಂದಲೇ ಮೂರು ತಿಂಗಳ ಕಾಲಮಿತಿಯಲ್ಲಿ ಮುಖ್ಯಮಂತ್ರಿ ತನಿಖೆಗೆ ಮುಂದಾಗಲಿ ಎಂದು ಆಗ್ರಹಿಸಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಅಧಿಕಾರಿಗಳಾಗಿದ್ದ ಭೀಮಾ ಶಂಕರ ಹಾಗೂ ಶಶಿ ಹಿರೇಮಠ ಅವರ ಫೋನ್ ಟ್ಯಾಪ್ ಆಗಿರುವ ಕುರಿತು ದೃಶ್ಯ ಮಾಧ್ಯಮಗಳು ವರದಿ ಮಾಡಿವೆ. ಫೋನ್ ಟ್ಯಾಪ್ ಸುಲಭ, ಸರಳವಲ್ಲ. ರಾಮಕೃಷ್ಣ ಹೆಗಡೆ ಅವರ ಪ್ರಕರಣದ ಬಳಿಕ ಇಂಥ ಕೃತ್ಯಕ್ಕೆ ಯಾರೂ ಸುಲಭವಾಗಿ ಕೈಹಾಕಲಾರರು ಎಂದು ಭಾವಿಸಿದ್ದೇನೆ. ನಾನಂತೂ ಯಾವುದೇ ಫೋನ್ ಕದ್ದಾಲಿಕೆಗೆ ಯಾವುದೇ ಅಧಿಕಾರಗೆ ಸೂಚಿಸಿಲ್ಲ. ಹೀಗಾಗಿಯೇ ಸಿ.ಎಂ. ಅವರಿಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.

ಫೋನ್ ಕದ್ದಾಲಿಕೆ ಪ್ರಕರಣ ಹೊರ ಬರುತ್ತಲೇ ನಾನು ಗೃಹ ಇಲಾಖೆಯ ಕೆಲ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಕೆಲವರು ಹೌದು, ಮತ್ತೆ ಕೆಲ ಅಧಿಕಾರಿಗಳು ಸುಳ್ಳು ಎಂದು ಹೇಳಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಸರಕಾರ ಸಮಗ್ರ ತನಿಖೆಗೆ ಮುಂದಾಗಬೇಕು ಎಂದರು.

ನಾನು ಮುಖಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತೂ ಮಾತನಾಡಿಲ್ಲ. ದೇಶದ ಹಲವು ಪ್ರಕರಣಗಳ ತನಿಖೆ ನಡೆಸಿರುವ ಸಿಬಿಐ ಏನು ತನಿಖೆ ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಪೊಲೀಸರು ಗೌರಿ ಲಂಕೇಶ, ಡಾ.ಎಂ.ಎಂ. ಕಲಬುರಗಿ ಅವರ ಹತ್ಯೆಯ ಸವಾಲುಗಳನ್ನು ಸಮರ್ಥವಾಗಿ ತನಿಖೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಹೀಗಾಗಿ ರಾಜ್ಯದ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

Advertisement

ಈ ಕುರಿತು ಮಾಧ್ಯಮಗಳು ಡಿ.ಕೆ.ಶಿವಕುಮಾರ ಹಾಗೂ ನನ್ನ ಮಧ್ಯೆ ಅನಗತ್ಯವಾಗಿ ಗೊಂದಲ ಸೃಷ್ಟಿಸಿದ್ದಕ್ಕೆ ನಾನು ಶಿವಕುಮಾರ ಕುರಿತು ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಆಗಿರುವ ಲೋಪಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ನಮಗೆ ಸಭ್ಯತೆ ಇಲ್ಲದಂತಾಗುತ್ತದೆ. ಹೀಗಾಗಿ‌ ಮಾಧ್ಯಮಗಳ ಅಚಾತುರ್ಯದಿಂದ ನನ್ನಿಂದಾಗಿರುವ ಲೋಪಕ್ಕೆ ಶಿವಕುಮಾರ ಅವರಲ್ಲಿ ವಿಷಾದ ವ್ಯಕ್ತಪಡಿಸುವಲ್ಲಿ ಯಾವುದೇ ಮುಜುಗುರ ಇಲ್ಲ ಎಂದರು.

ಕೇಂದ್ರ ಸರಕಾರ ತನಗಿರುವ ಅಧಿಕಾರ ಬಳಸಿ ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾಗಿ ಈ ಹಿಂದೆ ನೀಡಿದ್ದ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next